ಸೂಕ್ತ ಪರಿಹಾರ ನೀಡದಿದ್ದರೆ ಹೋರಾಟ

Kavital villagers meeting
ಅಮೀನಗಡ ಗ್ರಾಮದಲ್ಲಿ ಭಾರತ ಮಾಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭೂ ಸಂತ್ರಸ್ತರು ಸಭೆ ನಡೆಸಿದರು. ರೈತರಾದ ಸಿದ್ದಲಿಂಗಪ್ಪ ಸಾಹುಕಾರ ಬುದ್ದಿನ್ನಿ, ಶರಣಬಸವ ಉದ್ಬಾಳ ಗೋನವಾರ, ವೀರನಗೌಡ ಆನಂದಗಲ್, ಅಮರೇಶಪ್ಪ ಪಾಮನ ಕಲ್ಲೂರು, ಬಸವರಾಜಪ್ಪ ವಟಗಲ್, ಶರಣಪ್ಪ ಹರ್ವಾಪುರ, ಹುಚ್ಚರಡ್ಡೆಪ್ಪ ಎನ್.ಇತರರಿದ್ದರು.
Published on

ಕವಿತಾಳ: ಭಾರತ ಮಾಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಭೂಮಿ ನೀಡಿದ ಸಂತ್ರಸ್ತರಲ್ಲಿ ಗುತ್ತಿಗೆದಾರ ಮತ್ತು ಅಧಿಕಾರಿಗಳು ಗೊಂದಲ ಮೂಡಿಸುತ್ತಿದ್ದಾರೆ ಎಂದು ಅಮರಾವತಿ, ಗೋನವಾರ, ಪಾಮನಕಲ್ಲೂರು, ಆನಂದಗಲ್, ಅಮೀನಗಡ, ವಟಗಲ್ ಗ್ರಾಮದ ರೈತರು ಆರೋಪಿಸಿದರು.

ಅಮೀನಗಡದ ಹುಚ್ಚಬುಡ್ಡೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ರಸ್ತೆ ಕಾಮಗಾರಿಗಾಗಿ ಭೂಮಿ ಸ್ವಾಧೀನ ಪಡೆಯಲಾಗಿದೆ ಡಿಸಿ ಹೇಳುತ್ತಿದ್ದಾರೆ. ಆದರೆ, ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ.

ಆನಂದಗಲ್, ಕವಿತಾಳ, ಸಂತೆಕೆಲ್ಲೂರು ಕೆಲ ರೈತರಿಗೆ ಎಕರೆಗೆ 25 ಲಕ್ಷ ರೂ. ನೀಡಿದ್ದಾರೆ. ಅದೇ ಪಕ್ಕದ ರೈತರಿಗೆ ಕಡಿಮೆ ಹಣ ನೀಡಿದ್ದಾರೆ. ಅಮೀನಗಡದಲ್ಲಿ ಎಕರೆಗೆ ಕೇವಲ 2.80 ಲಕ್ಷ ರೂ. ಕೊಟ್ಟಿದ್ದಾರೆ. ಕೆಲವರಿಗೆ ಬೆದರಿಕೆ ಹಾಕಿ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಎಲ್ಲ ಭೂ ಸಂತ್ರಸ್ತರಿಗೆ ಸಮಾನ ಪರಿಹಾರ ನೀಡಬೇಕು. ಅಧಿಕಾರಿಗಳಿಗೆ ಮಾ.25ರವರೆಗೆ ಅವಕಾಶ ನೀಡುತ್ತೇವೆ. ಇಲ್ಲದಿದ್ದರೆ ಮಾ.26ರಂದು ವಟಗಲ್‌ನಲ್ಲಿ ರಸ್ತೆ ಸಂಚಾರ ತಡೆದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತರಾದ ಸಿದ್ದಲಿಂಗಪ್ಪ ಸಾಹುಕಾರ ಬುದ್ದಿನ್ನಿ, ಶರಣಬಸವ ಉದ್ಬಾಳ ಗೋನವಾರ, ವೀರನಗೌಡ ಆನಂದಗಲ್, ಅಮರೇಶಪ್ಪ ಪಾಮನ ಕಲ್ಲೂರು, ಬಸವರಾಜಪ್ಪ ವಟಗಲ್, ಶರಣಪ್ಪ ಹರ್ವಾಪುರ, ಹುಚ್ಚರಡ್ಡೆಪ್ಪ ನಾಯಕ, ಹುಚ್ಚಣ್ಣ ಗುಡಗುಂಟಿ, ಇಮ್ಮಣ್ಣ, ಸಣ್ಣ ಹನುಮಂತ ಹರಿಜನ, ಸಿದಾಮಪ್ಪ ಗೋನವಾರ, ಚಂದ್ರಶೇಖ, ಹನುಮರಡ್ಡೆಪ್ಪ ನಾಯಕ, ಉಸ್ಮಾನ್‌ಸಾಬ್, ಮಹಾದೇವಪ್ಪ, ಹುಚ್ಚರಡ್ಡಿ ಹಡಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net