

ಕವಿತಾಳ: ಮಸ್ಕಿ ತಾಲೂಕಿನ ಅಮೀನಗಡದಲ್ಲಿ ಮಂಗಳವಾರ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಜಲ ಸಂರಕ್ಷಣೆಗೆ ದಿನ್ನೆಯಿಂದ ತಗ್ಗಿನೆಡೆಗೆ ಕುರಿತು ಚಿಂತಾಮಣಿಯ ಫೌಂಡೇಷನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಸ್ಥೆಯ ಜಿಲ್ಲಾ ಸಂಚಾಲಕ ಖಾದರ್ ಪಾಷಾ ಮಾತನಾಡಿ, ದಿನ್ನೆಯಿಂದ ತಗ್ಗಿನಡಿಗೆ ಪರಿಕಲ್ಪನೆಯಡಿ 2022-23ನೇ ಸಾಲಿನಲ್ಲಿ ರೈತರ ಹೊಲ ಹಾಗೂ ಸರ್ಕಾರಿ ಜಮೀನಿನಲ್ಲಿ ಕೃಷಿ ಹೊಂಡ ಮತ್ತು ಚೆಕ್ ಡ್ಯಾಂ ನಿರ್ಮಿಸಲು ತಂತ್ರಜ್ಞಾನದ ಮೂಲಕ ಸ್ಥಳ ಗುರುತಿಸಲಾಗುವುದು. ಇದರಿಂದ ಅಂತರ್ಜಲ ಹೆಚ್ಚುವುದು. ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ತಾಪಂ ಇಒ ಬಾಬು ರಾಠೋಡ್, ಪಿಡಿಒಗಳಾದ ಶರೀಫ್ ಸಾಬ್, ಚಂದಪ್ಪ ಪೂಜಾರಿ, ಮಲ್ಲಣ್ಣ, ಮಂಜುನಾಥ ಈಚನಾಳ, ಸೋಮಣ್ಣ, ತಾಂತ್ರಿಕ ಸಲಹೆಗಾರರಾದ ಶಂಕರಗೌಡ, ಶಿವಲಿಂಗಪ್ಪ ಹಿರೇಮಠ, ಸತೀಶ್, ಶರಣಬಸವ, ಪವನಕುಮಾರ, ಮಂಜುನಾಥ, ಸಿಬ್ಬಂದಿ ಈರಪ್ಪ, ಮಲ್ಲಿಕಾರ್ಜುನ ಇದ್ದರು.