ಮಹಿಳೆಯರಿಂದ ಐದು ಕೋಟಿ ಕುಂಕುಮಾರ್ಚನೆ

Untitled design (3)
ಕವಿತಾಳದ ವಾಸವಿ ದೇವಸ್ಥಾನದಲ್ಲಿ ವರಮಹಾ ಲಕ್ಷ್ಮೀ ಹಬ್ಬ ಆಚರಿಸಲಾಯಿತು. ಓಂ ಶಾಂತಿಯ ಪಾರ್ವತಿ ಅಕ್ಕ, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ರಂಜೀತಾ ಗುರು ಬಾಗೋಡಿ, ಜ್ಯೋತಿ ಮಲ್ಲಿಕಾರ್ಜುನ ಇಲ್ಲೂರು, ಶ್ರೀದೇವಿ ವೆಂಕಟೇಶ ಇಲ್ಲೂರು, ಲಕ್ಷ್ಮೀ ಪ್ರಕಾಶ ಇಲ್ಲೂರು, ಸೀತಾ ರಮೇಶ ಬೆಳಗುಂದಿ ಉಪಸ್ಥಿತರಿದ್ದರು.
Published on

ಕವಿತಾಳ: ಪಟ್ಟಣದ ವಾಸವಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ವಾಸವಿ ಮಹಿಳಾ ಸಂಘ, ಆರ್ಯವೈಶ್ಯ ಸಮಾಜದ ಮಹಿಳೆಯರು ಮತ್ತು ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯ ಕವಿತಾಳದ ಪಾರ್ವತಿ ಅಕ್ಕ ಅವರ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಮತ್ತು ರಕ್ಷಾ ಬಂಧನ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ರಂಜೀತಾ ಗುರು ಬಾಗೋಡಿ ಮಾತನಾಡಿ, ನೂರಾರು ಮಹಿಳೆಯರಿಂದ ಐದು ಕೋಟಿ ಕುಂಕುಮಾರ್ಚನೆ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಪ್ರಮುಖರಾದ ಜ್ಯೋತಿ ಮಲ್ಲಿಕಾರ್ಜುನ ಇಲ್ಲೂರು, ಲಕ್ಷ್ಮೀ ಪ್ರಕಾಶ ಇಲ್ಲೂರು, ಸೀತಾ ರಮೇಶ ಬೆಳಗುಂದಿ, ಮಂಜುಳಾ ಮಲ್ಲಯ್ಯ ಇಲ್ಲೂರು, ನರಸಮ್ಮ, ಭಾಗ್ಯಲಕ್ಷ್ಮೀ, ರಜನಿ ಕೋಸ್ಗಿ, ಮಹಾಲಕ್ಷ್ಮೀ, ಜ್ಯೋತಿ ಮಲ್ಲಿಕಾರ್ಜುನ ಇಲ್ಲೂರು, ಶ್ರೀದೇವಿ ವೆಂಕಟೇಶ ಇಲ್ಲೂರು, ಲಕ್ಷ್ಮೀ ಪ್ರಕಾಶ ಇಲ್ಲೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net