

ಕವಿತಾಳ: ಭಾರತೀಯರಿಗೆ ನೂತನ ವರ್ಷ ಯುಗಾದಿ ಹಬ್ಬದಿಂದ ಪ್ರಾರಂಭವಾಗುತ್ತದೆ ಎಂದು ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಹೇಳಿದರು. ಹಾಲಪೂರದಲ್ಲಿ ಯುಗಾದಿ ಮರುದಿನ ಆಚರಿಸುವ ಕರಿ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದು ಸಂಪ್ರದಾಯ ಪ್ರಕಾರ ಯುಗಾದಿ ಹಬ್ಬವು ನಮಗೆ ನೂತನ ವರ್ಷವಾಗಿದೆ. ಪಕೃತಿಗೆ ಹೊಸತನವನ್ನು ತರುತ್ತದೆ ಎಂದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟರಡ್ಡಿ ಹಾಲಪೂರ. ಪ್ರಮುಖರಾದ ಬಸವರಾಜ, ಕರಿಯಪ್ಪ, ಹನುಮಂತ ಮಡಿವಾಳ, ನಿಂಗಪ್ಪ ನಾಯಕ, ಶರಣಬಸವ ಮಾನ್ವಿ, ಸಂಗಪ್ಪ, ದೇವಣ್ಣ, ಬಸವ ಮಾಲಿ ಗೌಡ, ಸುರೇಶ ನಾಯಕ, ಯಮನೂರು, ಪ್ರವೀಣ ಮಾನ್ವಿ ಇತರರಿದ್ದರು.