ಪ್ರಕೃತಿಯಲ್ಲಿ ಹೊಸತನ ಸೊಬಗು

Untitled design (36)
ಕವಿತಾಳ ವಾಸವಿ ದೇವಿ ಮೂರ್ತಿಯನ್ನು ಯುಗಾದಿ ಅಂಗವಾಗಿ ಹೂಗಳಿಂದ ಅಲಂಕರಿಸಲಾಗಿತ್ತು.
Published on


ಕವಿತಾಳ: ಪಟ್ಟಣದ ವಾಸವಿ ದೇವಸ್ಥಾನದಲ್ಲಿ ಯುಗಾದಿ ಅಂಗವಾಗಿ ಮಂಗಳವಾರ ಆರ್ಯವೈಶ್ಯ ಸಮಾಜದಿಂದ ವಾಸವಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ 6 ಗಂಟೆಗೆ ನೂತನ ವರ್ಷದ ಕ್ಯಾಲೆಂಡರ್ ಓದಲಾಯಿತು. ಆರ್ಯವೈಶ್ಯ ಸಮುದಾಯದ ಅಧ್ಯಕ್ಷ ಉದಯಕುಮಾರ ಇಲ್ಲೂರು ಮಾತನಾಡಿ, ದೇಶದ ಕಾಲಮಾನದ ಪ್ರಕಾರ ಯುಗಾದಿ ನಮಗೆ ನೂತನ ವರ್ಷ ಹಬ್ಬವಾಗಿದೆ. ಇಂದಿನಿಂದ ಪ್ರಕೃತಿಯಲ್ಲಿ ಹೊಸತನ ಕಂಡು ಬರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net