ಡೀಸೆಲ್ ಬಳಕೆಯ ಮಾಹಿತಿ ಕೊಡಿ

Kavital GP Meeting
ಕವಿತಾಳ ಪಪಂನಲ್ಲಿ ಅಧ್ಯಕ್ಷೆ ಖಾಸಿಂಬೀ ಚಾಂದಪಾಷಾ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸದಸ್ಯರಾದ ರಮೇಶ ನಗನೂರು, ಲಿಂಗರಾಜು , ಪಪಂ ಸಿಬ್ಬಂದಿ ಇದ್ದರು.
Published on

ಕವಿತಾಳ: ಪಪಂ ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷೆ ಖಾಸಿಂಬೀ ಚಾಂದಪಾಷಾ ಅಧ್ಯಕ್ಷತೆಯಲ್ಲಿ ಸೋಮವಾರ ಸಾಮಾನ್ಯ ಸಭೆ ನಡೆಯಿತು. ಮುಖ್ಯಾಧಿಕಾರಿ ಜಗನ್ನಾಥ ಕುಲ್ಕರ್ಣಿ ಮಾತನಾಡಿ, ಸದಸ್ಯರು ವಾಡ್‌ನಲ್ಲಿನ ಸಮಸ್ಯೆಗಳ ಮಾಹಿತಿ ನೀಡಬೇಕೆಂದು ಕೋರಿದರು. ರಮೇಶ ನಗನೂರು ಮತ್ತು ಲಿಂಗರಾಜು ಕಂದಗಲ್ ಮಾತನಾಡಿ, 2021ರಿಂದ ಇಲ್ಲಿವರೆಗೆ ಪಂಚಾಯಿತಿ ವಾಹನಗಳಿಗೆ ಬಳಸಿರುವ ಡೀಸೆಲ್ ಖರ್ಚಿನ ತನಿಖೆ ನಡೆಸಬೇಕು. ಅಲ್ಲಿವರೆಗೆ ಸಭೆ ನಡೆಸಬಾರದು ಎಂದು ಒತ್ತಾಯಿಸಿದರು. ಇತರ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು. ಈ ಕುರಿತು ಸಭೆಗೆ ಮಾಹಿತಿ ಒದಗಿಸಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.

ಪಟ್ಟಣದಲ್ಲಿರುವ ಅಂಗಡಿ, ಉದ್ದಿಮೆಗಳ ಶುಲ್ಕ ನವೀಕರಿಸುವ, ಕುಡಿಯುವ ನೀರಿನ ಸಮಸ್ಯೆ, ವಸತಿ ಬಡಾವಣೆಗಳನ್ನು ನೋಂದಣಿ, ಪಂಚಾಯಿತಿ ಮಳಿಗೆಗಳ ಬಾಡಿಗೆ ನೀಡಲು ಟೆಂಡರ್ ಕರೆಯುವುದು, 2021ರಿಂದ ಪಪಂನಿಂದ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸವ ಮತ್ತು ಪಂಚಾಯಿತಿ ಕಟ್ಟಡ ಬದಲಾವಣೆ ಬಗ್ಗೆ ಚರ್ಚಿಸಲಾಯಿತು.

ಉಪಾಧ್ಯಕ್ಷೆ ಎಲೀಜಾ, ಸದಸ್ಯರಾದ ರಾಘವೇಂದ್ರ ಶೆಟ್ಟಿ, ಹುಲುಗಪ್ಪ, ಲಾಳೆಸಾಬ್, ಯಲ್ಲಪ್ಪ, ರುಕ್ಮುದ್ದೀನ್, ಹುಚ್ಚಮ್ಮ, ಗೌರಮ್ಮ, ಅಂಬಮ್ಮ ಮ್ಯಾಗಳಮನಿ, ಪಂಚಾಯಿತಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net