

ಕವಿತಾಳ: ಕೆಕೆಆರ್‌ಡಿಬಿ ಯೋಜನೆಯಡಿ ಎರಡು ಕೋಟಿ ರೂ. ವೆಚ್ಚದಲ್ಲಿ ಮಲ್ಲದಗುಡ್ಡ ರಸ್ತೆಯಲ್ಲಿರುವ ದಾಸರ ಹಳ್ಳಕ್ಕೆ ನಿರ್ಮಿಸುತ್ತಿರುವ ಸೇತುವೆ ಸೇರಿ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಸಚಿವ ಎನ್.ಎಸ್.ಬೋಸರಾಜು ಚಾಲನೆ ನೀಡಿದರು.
ನಂತರ ಮಾತನಾಡಿ, ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಪಟ್ಟಣದ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದರು. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಿದ ಭೋಜನಾಲಯ ಕಟ್ಟಡ ಮತ್ತು ಅಂಬೇಡ್ಕರ್ ನಗರ ಶಾಲೆ ನೂತನ ಕಟ್ಟಡಗಳನ್ನು ಉದ್ಘಾಟಿಸಿದರು.
ಕನಕನಗರದಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಶಾಸಕ ಹಂಪಯ್ಯನಾಯಕ ಚಾಲನೆ ನೀಡಿದರು. ಪಪಂ ಮಾಜಿ ಸದಸ್ಯರಾದ ಕಿರಿಲಿಂಗಪ್ಪ, ಮಾಳಪ್ಪ ಕುರಬರ, ಹಾಲಿ ಸದಸ್ಯರಾದ ಲಿಂಗರಾಜ ಕಂದಗಲ್, ಸೂಗಪ್ಪ ಚುಕ್ಕಿ ಸಿರವಾರ, ರಾಜು ಬನ್ನಿಗಿಡದ, ಚಾಂದ್‌ಪಾಷಾ, ಶೇಖರಪ್ಪ ಸಹುಕಾರ, ವೆಂಕಟರಾವ್ 74 ಕ್ಯಾಂಪ್, ಅಯ್ಯಪ್ಪ ನಿಲೋಗಲ್, ಕರಿಯಪ್ಪ ತೋಳ, ಮೌನೇಶ, ತಿಪ್ಪಯ್ಯಸ್ವಾಮಿ, ಬಸಪ್ಪ ಕಂದಗಲ್, ಬಲವಂತರಾಯಗೌಡ ವಟಗಲ್, ಗಂಗಪ್ಪ ದಿನ್ನಿ ಇತರರಿದ್ದರು.