ತೋರಣದಿನ್ನಿ ರಸ್ತೆಯಲ್ಲಿ ತಗ್ಗು-ದಿನ್ನೆ

Untitled design
ತೋರಣದಿನ್ನಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ರಸ್ತೆ ತಗ್ಗಿನಲ್ಲಿ ಮಳೆ ನೀರು ನಿಂತಿರುವುದು.
Published on

ಕವಿತಾಳ: ತೋರಣದಿನ್ನಿ ಗ್ರಾಮದಲ್ಲಿನ ರಸ್ತೆ ಹದಗೆಟ್ಟಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ರಸ್ತೆ ಪೋತ್ನಾಳ ಹಾಗೂ ಮಲ್ಲದಗುಡ್ಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಗ್ರಾಮದಲ್ಲಿನ ಸಾರ್ವಜನಿಕ ಆಸ್ಪತ್ರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಸೇರಿ ವಿವಿಧೆಡೆ ತಗ್ಗುಗಳು ಬಿದ್ದಿದ್ದು, ವಾಹನ ಸವಾರರು ಅಪಘಾತಕ್ಕೀಡಾಗುವಂತಾಗಿದೆ. ನಾಲ್ಕು ವರ್ಷದಿಂದ ರಸ್ತೆ ಹದಗೆಟ್ಟಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ವಿವಿಧೆಡೆ ರಸ್ತೆ ದುರಸ್ತಿಯಾಗುತ್ತಿದ್ದರೂ ತೋರಣದಿನ್ನಿ ಗ್ರಾಮದ ರಸ್ತೆ ದುರಸ್ತಿಯಾಗದ ಬಗ್ಗೆ ಗ್ರಾಮಸ್ಥರಲ್ಲಿ ಚರ್ಚಿತ ವಿಷಯವಾಗಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ನಿರ್ಲಕ್ಷೃ ವಹಿಸಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಉಮಾಪತಿ ಹಾಗೂ ಸ್ಥಳೀಯರಾದ ಹನುಮಂತ ನಟಾಗಿ, ಶರಣಪ್ಪ, ರಾಮಚಂದ್ರಪ್ಪ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net