

ಕವಿತಾಳ: ತುಪ್ಪದೂರು ಗ್ರಾಮಕ್ಕೆ ಮಂಗಳವಾರ ಬಸ್ ಸಂಚಾರ ಆರಂಭಿಸಲಾಯಿತು.
ತುಪ್ಪದೂರಿಗೆ ಬಸ್ ಸಂಚಾರ ಇರಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಹೋಗಲು ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ತುರ್ವಿಹಾಳ ಹಾಗೂ ಗ್ರಾಪಂ ಅಧ್ಯಕ್ಷ ರಾಜಸಾಬ್ ಸೈಕಲ್ ಅವರಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸಂಚಾರ ಆರಂಭಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು.
ಶಾಸಕ ತುರ್ವಿಹಾಳ ಸೂಚನೆ ಮೇರೆಗೆ ಇಂದು ಮಸ್ಕಿ ಡಿಪೋದಿಂದ ಬೆಂಚಮರಡಿ, ಹರ‌್ವಾಪೂರ, ತುಪ್ಪದೂರು, ಪಾಮನಕಲ್ಲೂರು ಮಾರ್ಗವಾಗಿ ತುಪ್ಪದೂರಿಗೆ ಬಸ್ ಸಂಚಾರ ಆರಂಭಿಸಲಾಯಿತು. ತುಪ್ಪದೂರಿಗೆ ಬಂದ ಬಸ್‌ಗೆ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿದರು. ಪ್ರಮುಖರಾದ ಕೆಂಚಪ್ಪ, ಶಿವಣ್ಣ ಭೋವಿ, ಬಸವರಾಜ ಸ್ವಾಮಿ, ರಮೇಶ ಮರಾಠಿ, ಅಮರೇಗೌಡ, ವಿರುಪನಗೌಡ, ಆದನಗೌಡ, ಬಲವಂತರಾಯಗೌಡ ವಟಗಲ್, ಬಸವರಾಜ ಚಿತ್ತಾಪೂರ ಉಪಸ್ಥಿತರಿದ್ದರು.
ಫೋಟೋ ಇದೆ 11.ಕೆಟಿಎಎಲ್.01
ಕವಿತಾಳ ಸಮೀಪದ ತುಪ್ಪದೂರು ಗ್ರಾಮಕ್ಕೆ ಮೊದಲ ಬಾರಿಗೆ ಆಗಮಿಸಿದ ಬಸ್ ಅನ್ನು ಗ್ರಾಮಸ್ಥರು ಮಂಗಳವಾರ ಸ್ವಾಗತಿಸಿದರು. ಗ್ರಾಪಂ ಅಧ್ಯಕ್ಷ ರಾಜಸಾಬ್ ಸೈಕಲ್, ಮಾಜಿ ಅಧ್ಯಕ್ಷ ಅಮರಪ್ಪ, ಸದಸ್ಯ ಲಕ್ಷ್ಮಣ, ಡಿಪೋ ವ್ಯವಸ್ಥಾಪಕ ಆದಪ್ಪ ಕುಂಬಾರ, ಚಾಲಕ ಹುಚ್ಚಪ್ಪ ಇತರರಿದ್ದರು.