ದೇವಸ್ಥಾನ ಆವರಣದ ಶ್ರೀಗಂಧ ಮರ ಕಳವು

SHREEGHANDHA
ಕವಿತಾಳ ಸಮೀಪದ ಹರ‌್ವಪೂರದ ಉಟಕನೂರು ಮರಿಬಸವಲಿಂಗ ಸ್ವಾಮಿಗಳ ದೇವಸ್ಥಾನ ಆವರಣದ ಶ್ರೀಗಂಧದ ಮರವನ್ನು ಕಳ್ಳರು ಕಡಿದು ನೆಲಕ್ಕುರುಳಿಸಿರುವುದು.
Published on

ಕವಿತಾಳ: ಸಮೀಪದ ಹರ‌್ವಪೂರ ಉಟಕನೂರು ಮರಿಬಸವಲಿಂಗ ದೇವಸ್ಥಾನ ಆವರಣದ ಶ್ರೀಗಂಧದ ಮರವನ್ನು ಸೋಮವಾರ ನಸುಕಿನಲ್ಲಿ ಕಳವು ಮಾಡಲಾಗಿದೆ.

ಹರ‌್ವಪೂರ, ತುಪ್ಪದೂರು ಗ್ರಾಮದಲ್ಲಿ ಗಂಧದ ಮರಗಳು ಬಹಳಷ್ಟಿದ್ದು, ಇವುಗಳನ್ನು ಕದಿಯುವುದು ಆಗಾಗ ನಡೆಯುತ್ತಿರುತ್ತದೆ. ಇದೇ ರೀತಿ ದೇವಸ್ಥಾನ ಆವಾರಣಲ್ಲಿನ ಶ್ರೀಗಂಧದ ಮರಕ್ಕೂ ಕೊಡಲಿ ಏಟು ಕೊಟ್ಟಿರುವ ಚೋರರು, ರೆಂಬೆ-ಕೊಂಬೆಗಳನ್ನು ಬಿಟ್ಟು ಮರದ ಬುಡದಲ್ಲಿರುವ ಚಕ್ಕೆಯನ್ನು ಮಾತ್ರ ಕದ್ದೊಯ್ದಿದ್ದಾರೆ.

ಈ ಕುರಿತು ಬಸವರಾಜಪ್ಪಗೌಡ ಹರ‌್ವಪೂರ, ಬಸನಗೌಡ, ವಿಜಯಕುಮಾರ, ಬೆಟ್ಟಪ್ಪ ಮಾತನಾಡಿದ್ದು, ನಾವು ಬಹಳ ದಿನದಿಂದ ಗಂಧದ ಮರವನ್ನು ಕಳ್ಳರಿಂದ ರಕ್ಷಿಸಿದ್ದೇವು. ಆದರೆ ಸೋಮವಾರ ನಸುಕಿನಲ್ಲಿ ಅದನ್ನು ಕದ್ದಿದ್ದಾರೆ. ಕಳ್ಳರು ಮಾರಾಕಾಸ್ತ್ರ ಹಿಡಿದು ಬರುವುದರಿಂದ ನಮಗೆ ಜೀವ ಭಯವಿದೆ.

ಈ ಮೊದಲು ನಾವು 5ಕ್ಕೂ ಹೆಚ್ಚು ಗಂಧದ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೆವು. ನಂತರ ಏನಾಯಿತೋ ತಿಳಿಯಲಿಲ್ಲ. ಸಂಬಂಧಿಸಿದ ಅಧಿಕಾರಿಗಳು ಹರ‌್ವಪೂರ, ತುಪ್ಪದೂರು ಭಾಗದ ಶ್ರೀಗಂಧದ ಮರಗಳ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net