ದೇವಸ್ಥಾನಗಳು ಭಕ್ತಿಯ ಪ್ರತೀಕ

101222 Inauguration of Kotekal Yallamma Devi Temple
ಕವಿತಾಳ ಸಮೀಪದ ಕೋಟೆಕಲ್ ಹುಲಿಗೆಮ್ಮದೇವಿ ಕೆರೆ ದಂಡೆಯಲ್ಲಿ ಯಲ್ಲಮ್ಮ ದೇವಿಯ ಕಳಸಗಳಿಗೆ ಶಾಸಕ ಬಸನಗೌಡ ತುರ್ವಿಹಾಳ ಪೂಜೆ ಸಲ್ಲಿಸಿದರು.
Published on

ಕವಿತಾಳ: ಕೋಟೆಕಲ್‌ನ ಹುಲಿಗೆಮ್ಮ ದೇವಿಯ ಕೆರೆ ದಡದಲ್ಲಿ ನೂತನ ಯಲ್ಲಮ್ಮ ದೇವಸ್ಥಾನ ಮತ್ತು ಯಲ್ಲಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು. ಗ್ರಾಮದಿಂದ ದೇವಸ್ಥಾನದವರೆಗೆ ನೂತನ ಗೋಪುರದ ಕಳಸಗಳನ್ನು ಡೊಳ್ಳು ಕುಣಿತ, ಕಳಸ ಕನ್ನಡಿಯೊಂದಿಗೆ ಮೆರವಣಿಗೆ ಮುಖಾಂತರ ತರಲಾಯಿತು.

ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಕಳಸಗಳಿಗೆ ಪೂಜೆ ಸಲ್ಲಿಸಿ, ದೇವಸ್ಥಾನ ಉದ್ಘಾಟಿಸಿ ಮಾತನಾಡಿ, ದೇವಸ್ಥಾನಗಳು ಭಕ್ತಿಯ ಪ್ರತೀಕ. ಇಂದು ಕೋಟೆಕಲ್‌ನಲ್ಲಿ ಹನುಮಂತ ತಳವಾರ ಸೇರಿ ಗ್ರಾಮಸ್ಥರು ದೇಗುಲ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಯಲ್ಲಮ್ಮ ದೇವಿಯು ಭಕ್ತರ ಇಷ್ಟರ್ಥಾಗಳನ್ನು ಈಡೇರಿಸಲಿ ಎಂದು ಹಾರೈಸಿದರು.

ದಂಡಗುಂಡಪ್ಪ ತಾತಾ ಜಂಗಮರಹಳ್ಳಿ, ಚೇತನಪಾಟೀಲ್ ಮಸ್ಕಿ, ಗ್ರಾಪಂ ಅಧ್ಯಕ್ಷ ಮೌನೇಶ, ಮಾಜಿ ಗ್ರಾಪಂ ಅಧ್ಯಕ್ಷ ಅಮರೇಗೌಡ, ಶಿವರಾಜ ನಾಯಕ, ದೇವಪ್ಪ ನಾಯಕ, ಮಲ್ಲಯ್ಯಸ್ವಾಮಿ ಹಿರೇಮಠ, ಬಸವರಾಜ ಗದ್ದಡಕಿ, ಮುದುಕಣ್ಣ, ಹನುಮಂತ ಹೆಸರೂರು, ರಮೇಶ ತುರ್ವಿಹಾಳ, ಹನುಮಂತ ತಳವಾರ, ವೆಂಕಟೇಶ ಹೆಸರೂರ, ಬಸವರಾಜ ಕರ್ನಾಳ, ಹುಚ್ಚಬಸವ ಮರಡಿ, ರಮೇಶ ಹೆಸರೂರು, ಮೋಹನ್ ಹೆಸರೂರು. ಮಂಜುನಾಥ ತಳವಾರ, ಅಮರೇಶ ಕವಾಲಿ, ಆದಪ್ಪ ಪೂಜಾರಿ, ಹನುಮಂತ, ಅಯ್ಯನಗೌಡ, ರಮೇಶ ಕವಾಲಿ, ಕೃಷ್ಣಪ್ಪ ಕವಾಲಿ, ಶರಣಪ್ಪ ಕವಾಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net