ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಶಾಸಕ

260722 Kavitala MLA Visit Collage
ಕವಿತಾಳದ ಪದವಿ ಕಾಲೇಜಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
Published on

ಕವಿತಾಳ: ಕವಿತಾಳದಲ್ಲಿರುವ ವಸತಿ ಸಹಿತ ಪದವಿ ಕಾಲೇಜಿಗೆ ಸೋಮವಾರ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಕೊರತೆ ಹಾಗೂ ಇತರ ಸಮಸ್ಯೆಗಳ ಕುರಿತು ಜು.20ರಂದು ‘ಮರಂ ಕ್ವಾರಿ ಬಳಿ ಪದವಿ ಕಾಲೇಜು’ ಶೀರ್ಷಿಕೆಯಡಿ ‘ವಿಜಯವಾಣಿ’ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ತಾವು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಶಾಸಕರ ಗಮನ ಸೆಳೆದ ವಿದ್ಯಾರ್ಥಿಗಳಾದ ಬಸಮ್ಮ, ಶಾಂತಾ, ಹುಚ್ಚಮ್ಮ, ಶಾರದಾ, ಅಯ್ಯಪ್ಪ, ರಮೇಶ ಹಾಗೂ ಇತರರು ಕೂಡಲೇ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.

ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ರಾಜಾ ವೆಂಕಟಪ್ಪ ನಾಯಕ, ಇಷ್ಟು ದಿನವಾದರೂ ಇಲ್ಲಿನ ಸಮಸ್ಯೆಗಳ ಕುರಿತು ಏಕೆ ಗಮನಕ್ಕೆ ತರಲಿಲ್ಲ ಎಂದು ಪ್ರಾಚಾರ್ಯ ಡಾ. ರವಿಚಂದ್ರರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರು, ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

ಪ್ರಾಚಾರ್ಯ ಡಾ.ರವಿ ಚಂದ್ರ, ಉಪನ್ಯಾಸಕರಾದ ಅಯ್ಯಪ್ಪ, ಜಯರಾಜ, ಮೇರಿ, ಜೆಡಿಎಸ್ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಪ್ರಮುಖರಾದ ಸಿಲಾರ್‌ಸಾಬ್, ಖಾಜಪಾಷಾ, ಮಾನಪ್ಪ ಪತ್ತಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net