112 ಸಹಾಯವಾಣಿ ನೆರವು ಪಡೆಯಿರಿ

280922 Kavitala 112 Helpline Information
ಕವಿತಾಳ ಸಮೀಪದ ವಟಗಲ್ ಇಂದಿರಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 112 ಸಹಾಯವಾಣಿ ಬಗ್ಗೆ ಸಿಪಿಐ ಶಶಿಕಾಂತ ಮಾಹಿತಿ ನೀಡಿದರು.
Published on

ಕವಿತಾಳ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು, ನಿರ್ಗತಿಕರಿಗೆ ಕಾನೂನು ಸೇವೆ ದೊರೆಯಲು ಹಾಗೂ ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ಕಿರುಕುಳ ತಪ್ಪಿಸುವ ಉದ್ದೇಶದಿಂದ 112 ತುರ್ತು ಸೇವೆಯನ್ನು ಆರಂಭಿಸಲಾಗಿದ್ದು, ಇದರ ಸದ್ಬಳಕೆ ಆಗಬೇಕೆಂದು ಸಿರವಾರ ಸಿಪಿಐ ಶಶಿಕಾಂತ ಹೇಳಿದರು. ವಟಗಲ್ ಇಂದಿರಾ ವಸತಿ ಶಾಲೆಯಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ 112 ಸೇವೆಯ ಕುರಿತು ಮಾಹಿತಿ ನೀಡಿದರು. ನಿಮಗೆ ಅನ್ಯಾಯವಾದರೆ, ನಿಮ್ಮ ಕಣ್ಣು ಮುಂದೆ ತಪ್ಪು ನಡೆದರೆ ತಕ್ಷಣವೇ 112ಕ್ಕೆ ಕರೆ ಮಾಡಬೇಕು. ಸಿಬ್ಬಂದಿ ಬಂದು ಸಮಸ್ಯೆ ಪರಿಹರಿಸುತ್ತಾರೆ ಎಂದರು. ಪಿಎಸ್‌ಐ ಸದ್ದಾಂ ಹುಸೇನ್, ವಸತಿ ಶಾಲೆ ಪ್ರಾಚಾರ್ಯ ಮಹಾಂತೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net