ತಂದೆಯಿಲ್ಲದ ಮಕ್ಕಳಿಗೆ ಧನ ಸಹಾಯ; ವದಂತಿ ನಂಬಿ ಅರ್ಜಿ ಸಲ್ಲಿಕೆಗೆ ಮುಂದಾದ ಜನ

Kavital form
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಾಯೋಜಕತ್ವ ಯೋಜನೆಯಡಿ ಧನ ಸಹಾಯದ ಅರ್ಜಿ ಮಾದರಿ.
Published on


ಯೋಜನೆ ಇನ್ನು ಜಾರಿಯಾಗಿಲ್ಲ ಎಂದು ತಿಳಿಸಿದ ಅಧಿಕಾರಿಗಳು

ಕವಿತಾಳ: ತಂದೆ ಇಲ್ಲದ ಮಕ್ಕಳಿಗೆ ವರ್ಷಕ್ಕೆ 24 ಸಾವಿರ ರೂ., ಇನ್ನು ಕೆಲವರಿಗೆ 48 ಸಾವಿರ ರೂಪಾಯಿ ಸ್ಕಾಲರ್‌ಶಿಪ್ ಸೌಲಭ್ಯವಿದೆ ಎಂಬ ವದಂತಿ ನಂಬಿ ಜನರು ಅರ್ಜಿಗಾಗಿ ಮುಗಿಬಿದ್ದಿದ್ದಾರೆ. ಈ ಕುರಿತು ಅರ್ಜಿಯ ಮಾದರಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅರ್ಜಿ ಮಾದರಿ ಮೇಲೆ ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪ್ರಾಯೋಜಕತ್ವ ಯೋಜನೆಯಡಿ ಧನ ಸಹಾಯಕ್ಕೆ ಅರ್ಜಿ ಎಂದು ಬರೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ರಕ್ಷಣಾಧಿಕಾರಿ ಕಚೇರಿ ಮೊಹರು ಇದೆ. ಮಾಹಿತಿ ನೋಡಿ ಜನರು ಕಂಪ್ಯೂಟರ್ ಕೇಂದ್ರಗಳಿಗೆ, ಇಲ್ಲವೇ ರಾಯಚೂರಿನಲ್ಲಿರುವ ಜಿಲ್ಲಾ ಮಕ್ಕಳ ಘಟಕದ ಕಚೇರಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಕವಿತಾಳ ಮತ್ತು ಸುತ್ತಲಿನ ಜನರು ಅರ್ಜಿ ಸಲ್ಲಿಸಲು ಬೇಕಾಗುವ ಮಾಹಿತಿ ಪಡೆಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ರಾಯಚೂರಿಗೆ ಹೋಗಿ ಅರ್ಜಿ ತರುವುದಾಗಿ ಹಣ ಕೀಳುತ್ತಿದ್ದಾರೆ.

ಪ್ರಾಯೋಜಕತ್ವ ಯೋಜನೆಯಡಿ ಧನ ಸಹಾಯ ನೀಡುವ ಯೋಜನೆ ಇನ್ನೂ ಜಾರಿಯಾಗಿಲ್ಲ. ಡಿಸೆಂಬರ್‌ನಲ್ಲಿ ಜಾರಿಯಾಗಬಹುದು ಎನ್ನಲಾಗುತ್ತಿದೆ. ಜಾರಿಯಾಗದೆ ಇರುವ ಯೋಜನೆಯ ಬಗ್ಗೆ ಜನರು ಜಾಗೃತರಾಗಬೇಕು. ಯೋಜನೆ ಜಾರಿಯಾದರೆ ಇಲಾಖೆಯಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು.| ಈರಮ್ಮ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಹೊರಕ್ಷೇತ್ರ ಕಾರ್ಯಕರ್ತೆ, ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net