ಶರಣರ ತತ್ವಗಳ ಜೀವನದಲ್ಲಿ ಅಳವಡಿಸಿಕೊಳ್ಳಿ

011222 Aminagada Hemareddy Mallamma Jayanti
ಕವಿತಾಳ ಸಮೀಪದ ಅಮೀನಗಡದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
Published on

ಕವಿತಾಳ: ಸಮೀಪದ ಅಮೀನಗಡದಲ್ಲಿ ರಡ್ಡಿ ಸಮಾಜ ಮತ್ತು ಗ್ರಾಮಸ್ಥರಿಂದ ಗುರುವಾರ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ನವಲಕಲ್ ಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿ, ಶರಣರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು. ಹೇಮರಡ್ಡಿ ಮಲ್ಲಮ್ಮನವರು ರಡ್ಡಿ ಸಮಾಜದ ಆರಾಧಕರಾಗಿದ್ದಾರೆ. ಇವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದರು.

ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರವನ್ನು ಮುಖ್ಯರಸ್ತೆಯಿಂದ ಈಶ್ವರ ದೇವಸ್ಥಾನದವರೆಗೆ ಕಳಸ ಕನ್ನಡಿ ಕುಂಭ ಪುರಾವಂತ ಸೇವಾ ಮೆರವಣಿಗೆ ಮುಖಾಂತರ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಪ್ರಮುಖರದ ಬಸವಲಿಂಗಮ್ಮ ಅಮ್ಮ, ವಿಶ್ವನಾಥ ರಡ್ಡಿ ಚಕೋಟಿ ಗುತ್ತೇದಾರ, ಅಮರೆಗೌಡ ಹುಂಚೇಡಿ, ಸುಭಾಷ್ ದೇಸಾಯಿ, ಕಿರಣ್ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net