

ಕವಿತಾಳ: ಪಾಮನಕಲ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ಕಾರಿ ಆಯುಷ್ ಚಿಕಿತ್ಸಾಲಯದಿಂದ ಗುರುವಾರ ಆಯುರ್ವೇದ ಪ್ರತಿ ಮನೆಯಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಕರಿಗೆ ಔಷಧ ವಿತರಿಸಿ ಮಾತನಾಡಿದ ಆಯುರ್ವೇದ ವೈದ್ಯಾಧಿಕಾರಿ ಶರಣಪ್ಪ, ಆಯುರ್ವೇದ ಔಷಧ ಸೇವನೆಯಿಂದ ಅಡ್ಡ ಪರಿಣಾಮ ಇರುವದಿಲ್ಲ. ರೋಗದಿಂದ ಗುಣವಾಗಲು ತಡವಾಗಬಹುದು. ಆದರೆ, ಶಾಶ್ವತವಾಗಿ ಗುಣವಾಗಬಹುದು. ಇದರ ಬಗ್ಗೆ ತಿಳಿವಳಿಕೆ ಬೇಕಾಗಿದೆ. ಪ್ರತಿಯೊಬ್ಬರೂ ಆಯುರ್ವೇದ ಔಷಧ ಬಳಸುವಂತಾಗಬೇಕು ಎಂದರು. ಡಾ.ರಾಜೇಂದ್ರ ಪೋತ್ನಾಳ, ಮುಖ್ಯ ಶಿಕ್ಷಕ ಮಾರ್ಟಿನ್ ಅಮಲ್ ರಾಜು, ಬಸವರಾಜ ಆರ್., ಬಸವರಾಜ ಗಲಗಿನ, ಸುರೇಖಾ ಉಪಸ್ಥಿತರಿದ್ದರು.