ಆರ್ಯುರ್ವೇದ ಚಿಕಿತ್ಸೆಯಿಂದ ಶಾಶ್ವತ ಪರಿಹಾರ

Published on

ಕವಿತಾಳ: ಆಯುರ್ವೇದವು ಪುರಾತನ ವೈದ್ಯ ಪದ್ಧತಿಯಾಗಿದ್ದು, ಯಾವುದೇ ಅಡ್ಡಪರಿಣಾಮ ಇರುವುದಿಲ್ಲ ಎಂದು ಪಾಮನಕಲ್ಲೂರು ಆಯುರ್ವೇದ ಆಸ್ಪತ್ರೆ ನಿವೃತ್ತ ವೈದ್ಯಾಧಿಕಾರಿ ಶರಣಪ್ಪ ಕವಿತಾಳ ಹೇಳಿದರು.

ಪಾಮನಕಲ್ಲೂರು ಆಯುರ್ವೇದ ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಬ್ಬಂದಿ ಹಾಗೂ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತಾನಾಡಿದರು. ಕಳೆದ 30 ವರ್ಷಗಳಿಂದ ಆಯುರ್ವೇದ ವೈದ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಆಯುರ್ವೇದ ಪದ್ಧತಿ ಚಿಕಿತ್ಸೆ ಪಡೆದ ಬಹುತೇಕ ಜನರು ಗುಣಮುಖರಾಗಿದ್ದಾರೆ.

ಕಾಯಿಲೆಗಳಿಗೆ ಇದು ಶಾಶ್ವತವಾದ ಪರಿಹಾರವಾಗಿದ್ದು, ಪ್ರತಿಯೊಬ್ಬರೂ ಆಯುರ್ವೇದ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು. ಯೋಗ ಗುರು ಚಂದ್ರಯ್ಯಸ್ವಾಮಿ ಮಾತನಾಡಿದರು.

ರಂಗಭೂಮಿ ಕಲಾವಿದ ವಿಜಯಕುಮಾರ ಗುತ್ತೇದಾರ, ಪ್ರಮುಖರಾದ ಶಿವಕುಮಾರ ಜಹಗೀರದಾರ, ಮಲ್ಲೇಶಪ್ಪ ಬಳಿ, ಸಂಗಪ್ಪ ಹಡಪದ, ಚನ್ನಬಸವ ಸಂಗದ, ದೇವರಡ್ಡಿ ಮರಡ್ಡಿ, ಬಸವರಾಜ ಬುಕನಟ್ಟಿ, ಡಾ.ದ್ಯಾಮಪ್ಪ ಹುಲ್ಲೂರು, ಡಾ.ಅಮಜಾದ್ ಸಿಂಧನೂರು, ಮೈನುದ್ದೀನ್, ಚನ್ನಬಸವ, ಶಿವರಾಜ, ಶಶಿರೇಖಾ, ಚಂದ್ರಕಲಾ, ಸುವರ್ಣ, ಮಾಳಮ್ಮ, ಶ್ರೀದೇವಿ, ಸ್ವಾತಿ, ಗಾಯತ್ರಿ, ಲಾಲುಸಾಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net