ವರದಿ ಕಡೆಗಣಿಸಿ ಅನ್ಯಾಯ ಎಸಗಿದ ಸರ್ಕಾರ

ktl-1
ಕವಿತಾಳದಲ್ಲಿ ಅಲೆಮಾರಿ ಸಮುದಾಯದಿಂದ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಬುರ‌್ರಕಥಾ ಕಲಾವಿದೆ ಅಯ್ಯಮ್ಮ ಯಡವಲ್, ದುರುಗೇಶ ಯಡವಲ್, ಅಂಬಣ್ಣ, ರಾಮಲಿಂಗ, ನಾಗಪ್ಪ, ವೀರಭದ್ರಪ್ಪ, ಲಕ್ಷ್ಮಣ, ರಮೇಶ, ಶಾಂತಮ್ಮ ಇತರರಿದ್ದರು.
Published on

ಕವಿತಾಳ: ರಾಜ್ಯ ಸರ್ಕಾರ ಅಲೆಮಾರಿ ಜನಾಂಗಕ್ಕೆ ಸೂಕ್ತ ಮೀಸಲಾತಿ ನೀಡದೆ ವಂಚಿಸಿದೆ ಎಂದು ಬುರ‌್ರಕಥಾ ಕಲಾವಿದೆ ಅಯ್ಯಮ್ಮ ಯಡವಲ್ ಆರೋಪಿಸಿದರು.

ಅಲೆಮಾರಿ ಜನಾಂಗದಿಂದ ಶುಕ್ರವಾರ ಸಾಕೇತಿಕವಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಲೆಮಾರಿ ಜನಾಂಗ ಮತ್ತು ಬುಡಕಟ್ಟು ಸಮುದಾಯದಲ್ಲಿ 50 ಉಪಜಾತಿಗಳಿವೆ. ಶೇ.1 ರಷ್ಟು ಮೀಸಲಾತಿ ನೀಡುವಂತೆ ನ್ಯಾ.ನಾಗಹೋಹನ್ ದಾಸ್ ಸಮಿತಿ ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರ ಅದನ್ನು ಕಡೆಗಣಿಸಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದರು.

ಸಮುದಾಯದ ಪ್ರಮುಖ ದುರುಗೇಶ ಯಡವಲ್ ಮಾತನಾಡಿ, ರಾಜ್ಯ ಸರ್ಕಾರ ನಮಗೆ ಶೇ. 1 ಮೀಸಲು ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ಅಂಬಣ್ಣ, ರಾಮಲಿಂಗ, ನಾಗಪ್ಪ, ವೀರಭದ್ರಪ್ಪ, ಲಕ್ಷ್ಮಣ, ರಮೇಶ, ರವಿ, ಚಂದ್ರ, ಬಸವರಾಜ, ಸಿದ್ದಪ್ಪ, ಮಹೇಶ, ಹುಸೇನಪ್ಪ, ಶಾಂತಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net