ಸಮರ್ಪಕವಾಗಿ ಮಾಹಿತಿ ನೀಡದಿದ್ದರೆ ಕ್ರಮ

Kavital road repair work
ಕವಿತಾಳದಲ್ಲಿ ಭಾನುವಾರ ಶಾಸಕ ಹಂಹಯ್ಯನಾಯಕ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಮಾಳಪ್ಪ, ಪಪಂ ಸದಸ್ಯ ಮಲ್ಲಿಕಾರ್ಜುನಗೌಡ, ಸಿಂಡಿಕೇಟ್ ಸದಸ್ಯ ಶಿವಣ್ಣ ವಕೀಲ, ಪ್ರಮುಖರಾದ ಚನ್ನಯ್ಯಸ್ವಾಮಿ, ಅಲ್ಲಮ ಪ್ರಭು, ಚಂದ್ರು, ಗಂಗಪ್ಪ ದಿನ್ನಿ, ಒವಣ್ಣ, ತಿಪ್ಪಯ್ಯಸ್ವಾಮಿ ಇತರರಿದ್ದರು.
Published on

ಕವಿತಾಳ: ಪಟ್ಟಣದಲ್ಲಿ ವಿವಿಧ ಕಾಮಗಾರಿಗೆ ಭಾನುವಾರ ಶಾಸಕ ಹಂಪಯ್ಯ ನಾಯಕ ಚಾಲನೆ ನೀಡಿದರು.

ಕೆಕೆಆರ್‌ಡಿಬಿ ಯೋಜನೆಯಡಿ 90 ಲಕ್ಷ ರೂ. ಮೊತ್ತದಲ್ಲಿ ಸಂತೆ ಬಜಾರ್‌ನಿಂದ ಮುಖ್ಯ ರಸ್ತೆ ಕಾಮಗಾರಿ, 25 ಲಕ್ಷ ರೂ. ವೆಚ್ಚದಲ್ಲಿ ಭೋವಿ ಸಮಾಜದ ರುದ್ರಭೂಮಿಗೆ ಹೋಗುವ ರಸ್ತೆ ಕಾಮಗಾರಿ, 34 ಲಕ್ಷ ರೂ. ವೆಚ್ಚದ ಸರ್ಕಾರಿ ಕಾಲೇಜಿಗೆ ಎರಡು ಹೆಚ್ಚುವರಿ ಕೊಠಡಿ ಕಾಮಗಾರಿಗೆ ಚಾಲನೆ ನೀಡಿದರು.

ಏಕಾಏಕಿ ಕಾರ್ಯಕ್ರಮ ಆಯೋಜಿಸುವುದರಿಂದ ಕೆಲವರಿಗೆ ಮಾಹಿತಿ ಇಲ್ಲದಂತಾಗಿದೆ. ಒಂದು ದಿನ ಮುಂಚೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಬೇಕಿತ್ತು ಎಂದು ಕಾಂಗ್ರೆಸ್ ಕಾರ್ಯಕರ್ತರು ಶಾಸಕರಿಗೆ ಹೇಳಿದರು. ಇದಕ್ಕೆ ಶಾಸಕ ಹಂಪಯ್ಯ ನಾಯಕ, ಕೆಕೆಆರ್‌ಡಿಬಿ ಎಇಇ ಹನುಮಂತಪ್ಪ ಮತ್ತು ಜೆಇ ರಾಘವೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಸೇವೆ ಮಾಡುತ್ತಿರಾ ಅಥವಾ ಬಿಜೆಪಿ ಏಜೆಂಟರಾ? ನಮ್ಮ ಪಕ್ಷದ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷೃ ವಹಿಸುತ್ತಿರಿ. ಅದೇ ಬಿಜೆಪಿಯವರ ಕಾರ್ಯಕ್ರಮ ನಿಷ್ಠೆಯಿಂದ ಮಾಡುತ್ತಿರಿ. ಕಾಮಗಾರಿ ಚಾಲನೆ ಬಗ್ಗೆ ನನಗೂ ಕೂಡ ಇಂದು ತಿಳಿಸಿದ್ದಿರಿ. ನೀವು ನೌಕರಿ ಮಾಡುವದಾರೆ ಮಾಡಿ ಇಲ್ಲ ಜಾಗ ಖಾಲಿಮಾಡಿ ಎಂದು ಅಧಿಕಾರಿಗಳಿಗೆ ಶಾಸಕರು ಎಚ್ಚರಿಸಿದರು.ಜಿಪಂ ಮಾಜಿ ಸದಸ್ಯರಾದ

ಮಾಳಪ್ಪ, ಕಿರಿಲಿಂಗಪ್ಪ, ಪಪಂ ಸದಸ್ಯ ಮಲ್ಲಿಕಾರ್ಜುನಗೌಡ, ಸಿಂಡಿಕೇಟ್ ಸದಸ್ಯ ಶಿವಣ್ಣ ವಕೀಲ, ಎಸ್‌ಡಿಎಮ್‌ಸಿ ಅಧ್ಯಕ್ಷ ಯಾಕೂಬ್, ಬಿಎಓ ಚಂದ್ರಶೇಖರ ದೊಡ್ಡಮನಿ, ಪ್ರಮುಖರಾದ ಹನುಮಂತ ಬ್ಯಾಂಕ್, ಮೌನೇಶ ಕೊಡ್ಲಿ, ಈರಣ್ಣ ಕೇಳಗೇರ, ಅಲ್ಲಮಪ್ರಭು, ಚಂದ್ರು ಗಂಗಪ್ಪ ದಿನ್ನಿ, ಒವಣ್ಣ, ತಿಪ್ಪಯ್ಯಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net