ಸಾಮೂಹಿಕ ವಿವಾಹದಿಂದ ಸಾಲಮುಕ್ತ

060522 Utakanuru Mass Wedding
ಕವಿತಾಳ ಸಮೀಪದ ಹರ್ವಾಪೂರದಲ್ಲಿ ಉಟಕನೂರು ಮರಿಬಸವಲಿಂಗಸ್ವಾಮಿ ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
Published on

ಕವಿತಾಳ: ಸಮೀಪದ ಹರ್ವಾಪೂರ ಗ್ರಾಮದ ಉಟಕನೂರು ಮರಿ ಬಸವಲಿಂಗಸ್ವಾಮಿ ಜಾತ್ರೆಯ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. 23 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ವಧು, ವರರಿಗೆ ಮಾಂಗಲ್ಯ ವಿತರಿಸಿ ಪಿಠಾಧಿಪತಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಸಾಮೂಹಿಕ ವಿವಾಹ ದೈವದಿಂದಾಗುವ ಕಾರ್ಯವಾಗಿದೆ. ಬಡ ನವ ದಂಪತಿ ಸಾಲದಿಂದ ಮುಕ್ತರಾಗಿರಲಿ ಎನ್ನುವ ಉದ್ದೇಶದಿಂದ ಜಾತ್ರೆಯಲ್ಲಿ ಸಾಮೂಹಿಕ ವಿವಾಹ ಆಯೋಜಿಸುತ್ತಿರುವುದು ಶ್ಲಾಘನಿಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net