ಉಟಕನೂರಿನಲ್ಲಿ 27ರಿಂದ ಸಿದ್ದೇಶ್ವರ ಪುರಾಣ

25122022 Kavital Mari basavaraj swamiji
Published on

ಕವಿತಾಳ: ಉಟಕನೂರು ಮರಿಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ ಜಾತ್ರೆ ಅಂಗವಾಗಿ ಬಸವಲಿಂಗ ದೇಶೀಕೇಂದ್ರ ಶಿವಯೋಗಿಗಳ ಪುಣ್ಯಸ್ಮರಣೆ ಮತ್ತು ಅಂಕಲಗಿಯ ಅಡವಿ ಸಿದ್ದೇಶ್ವರ ಪುರಾಣ ಪ್ರವಚನವನ್ನು ಡಿ.27ರಿಂದ ಜ.14ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪಿಠಾಧಿಪತಿ ಮರಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

27ರಂದು ಬೆಳಗ್ಗೆ ಬಸವಲಿಂಗ ಶಿವಯೋಗಿ ಸ್ವಾಮೀಜಿ ಕರ್ತೃ ಗದ್ದುಗೆಗೆ ರುದ್ರಾಭೀಷೆಕ, ಸಹಸ್ರ ಬಿಲ್ವಾರ್ಚನೆ, ಮಂಗಳಾರತಿ ನಡೆಸಲಾಗುವದು. ಸಂಜೆ ಶ್ರೀಗಳ ಪಲ್ಲಕ್ಕಿ ಉತ್ಸವ, ಕಳಸ ಕನ್ನಡಿ ಬಾಜ-ಭಜಂತ್ರಿ, ಡೊಳ್ಳು ಭಜನಾ ಸಂಘದೊಂದಿಗೆ ಮೆರವಣಿಗೆ ಮಾಡಲಾಗುವದು. ಸಂಜೆ 7ರಿಂದ 9ರವರೆಗೆ ಅಂಕಲಗಿಯ ಅಡವಿ ಸಿದ್ದೇಶ್ವರ ಪ್ರರಾಣ ಪ್ರವಚನವನ್ನು ಗಾನಯೋಗಿ ಪಂಡಿತ ಪುಟ್ಟರಾಜರ ಶಿಷ್ಯರಾದ ಶ್ರವಣಕುಮಾರ ಹಿರೇಮಠ, ಮನೋಹರ ಪಿ.ಹಿರೆಮಠ, ಮಲ್ಲಿನಾಥಸ್ವಾಮಿ ಹಿರೇಮಠ ನಡೆಸಿಕೊಡಲಿದ್ದಾರೆ.

ಜ.15ರಂದು ಮರಿಬಸವಲಿಂಗ ದೇಶಿಕೇಂದ್ರ ಸ್ವಾಮಿಗಳ ಜಾತ್ರೆಯನ್ನು ಸಡಗರದಿಂದ ನಡೆಸಲಾಗುವುದು ಎಂದು ಮರಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net