

ಕವಿತಾಳ: ಸಮೀಪದ ಮಲ್ಲದಗುಡ್ಡ ಗ್ರಾಮದ ಆರಾಧ್ಯ ದೈವ ವೀರಭದ್ರ ದೇವರ 19ನೇ ವಾರ್ಷಿಕೋತ್ಸವ ಅಂಗವಾಗಿ 11 ದಿನಗಳ ಕಾಲ ಎಮ್ಮಿಗನೂರು ಜಡೆ ತಾತನವರ ಪುರಾಣ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಪುರಾಣ ಮಹಾಮಂಗಲ ಕಾರ್ಯಕ್ರಮ ಜರುಗಿತು. ಭಕ್ತರು ಅಗ್ನಿಕುಂಡವನ್ನು ಹಾಯ್ದು ಹರಕೆ ತಿರಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ ಕಳಸ ಮೆರವಣಿಗೆ, ಪುರವಂತಿಕೆ ಸೇವೆ, ಪಲ್ಲಕ್ಕಿ ಉತ್ಸವ ವೀರಭದ್ರ ದೇವಸ್ಥಾನದವರೆಗೆ ಸಾಗಿತು. ನಂತರ ಧರ್ಮಸಭೆ ನಡೆಸಲಾಯಿತು. ಕರೆಗುಡ್ಡ ಮಠದ ಮಹಾಂತಲಿಂಗ ಶಿವಚಾರ್ಯ ಸ್ವಾಮಿ, ಉಟಕನೂರುನ ಮರಿ ಬಸವರಾಜ ದೇಶಿಕೆಂದ್ರ ಸ್ವಾಮೀಜಿ, ಕರಿಬಸಯ್ಯಸ್ವಾಮಿ, ಗುಂಡಯ್ಯಸ್ವಾಮಿ, ವೀರಭದ್ರಯ್ಯಸ್ವಾಮಿ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಅಮರೇಶಪ್ಪ ನೆಲಹಾಳ, ವೈ.ಅಮರೇಗೌಡ, ಮಂಜುನಾಥ ಸ್ವಾಮಿ, ರಂಗಯ್ಯನಾಯಕ, ಮಲ್ಲಯ್ಯ ಗೋರ್ಕಲ್, ನಿಂಗಯ್ಯ ಜವಳಗೇರ, ಈಶಪ್ಪ ಸಜ್ಜನ ಇದ್ದರು.