ಭಕ್ತರ ದೈವ ಕಲ್ಮಠಶ್ರೀಗಳು

kavital kalmath sri
ಕವಿತಾಳದ ಕಲ್ಮಠದಲ್ಲಿ ಬಸವಲಿಂಗಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ಕಲ್ಮಠದ ಶ್ರೀ ಸಿದ್ದಲಿಂಗಸ್ವಾಮಿ, ಶಾಂತಯ್ಯಸ್ವಾಮಿ, ಮಾನಪ್ಪ ಪತ್ತಾರ, ಸುಭಾಸ್ ಚಕೋಟಿ, ಸಂಗಪ್ಪ ಗೊರೆಬಾಳ, ಶಿವುಕುಮಾರ ಸಾಹುಕಾರ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಉದಯ ಕುಮಾರ ಇಲ್ಲೂರು, ರಾಚಯ್ಯಸ್ವಾಮಿ, ದೊಡ್ಡಪ್ಪ ಕಂದಗಲ್ ಉಪಸ್ಥಿತರಿದ್ದರು.
Published on

ಕವಿತಾಳ: ಪಟ್ಟಣದ ಕಲ್ಮಠದಲ್ಲಿ ಸೋಮವಾರ ಬಸವಲಿಂಗಸ್ವಾಮಿ ಕಲ್ಮಠ ಅವರ 6ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.

ಮಠದ ಪೀಠಾಧಿಪತಿ ಸಿದ್ದಲಿಂಗಸ್ವಾಮಿಗಳು ಪೂಜೆ ನೆರವೇರಿಸಿ ಮಾತನಾಡಿ, ಕಲ್ಮಠದ ಲಿಂಗೈಕ್ಯ ಬಸವಲಿಂಗಸ್ವಾಮಿಗಳು ಮಠದ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಇವರು ಅಪಾರ ಭಕ್ತ ಸಮೂಹ ಹೊಂದಿದ್ದರು. ನೇರ ನಡೆನುಡಿಗಾಗಿ ಪ್ರಸಿದ್ಧಿಯಾದ ಇವರು, ಭಕ್ತರ ಪಾಲಿನ ಆರಾಧ್ಯ ದೈವವಾಗಿದ್ದರು ಎಂದರು.

ಶಾಂತಯ್ಯಸ್ವಾಮಿ, ಸುಭಾಸ್ ಚಕೋಟಿ, ಸಂಗಪ್ಪ ಗೊರೆಬಾಳ, ಶಿವುಕುಮಾರ ಸಾಹುಕರ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಉದಯ ಕುಮಾರ ಇಲ್ಲೂರು, ರಾಚಯ್ಯಸ್ವಾಮಿ, ದೊಡ್ಡಪ್ಪ ಕಂದಗಲ್ ಉಪಸ್ಥಿತ ರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net