

ಕವಿತಾಳ: ಸಮೀಪದ ಕಾಚಪೂರದ ಯರಲಗಡ್ಡಿ ಹನುಮಂತ ಜಾತ್ರೆ ಯುಗಾದಿ ಪ್ರಯುಕ್ತ ಮಂಗಳವಾರ ಅದ್ದೂರಿಯಾಗಿ ಜರುಗಿತು. ಪಲ್ಲಕ್ಕಿ ಮೆರವಣಿಗೆ ಮೂಲಕ ಮಠದ ಪೂಜ್ಯರಾದ ಹನುಮಂತ ಪೂಜಾರಿ ಅವರನ್ನು ಬಸವಣ್ಣ ದೇವಸ್ಥಾನಕ್ಕೆ ಕರೆತರಲಾಯಿತು. ಹನುಮಂತ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಭಕ್ತರು ಹರಕೆ ತೀರಿಸಿದರು. ಹನುಮಂತ ಪೂಜಾರಿ ಮಳೆ ಬೆಳೆ ಚೆನ್ನಾಗಿಯಾಗುತ್ತದೆ ಎಂದು ಹೇಳಿಕೆ ನೀಡಿದರು. ಪ್ರಮುಕರಾದ ಭೀಮಣ್ಣ ನಾಯಕ, ಹನುಮಂತ ಕವಿತಾಳ, ಮೌನೇಶ ಕವಿತಾಳ, ಹುಚ್ಚಪ್ಪ ಕಾಚಪೂರ, ಹುಚ್ಚಬುಡ್ಡ ಅಮೀನಗಡ, ಆದನಗೌಡ, ಚಂದ್ರಶೇಖರ ನಾಯಕ ಇದ್ದರು..