ಜನ ಮನರಂಜಿಸಿದ ಸಾಮಾಜಿಕ ನಾಟಕ

Untitled design (30)
ಕಾಚಪೂರದಲ್ಲಿ ಬಡವನ ಒಡಲು ಬೆಂಕಿಯ ಸಿಡಿಲು ಸಾಮಾಜಿಕ ನಾಟಕಕ್ಕೆ ಗಲಗಿನ ದೇವಯ್ಯಸ್ವಾಮಿ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ಬಸವಲಿಂಗಮ್ಮ, ಪ್ರಮುಖರಾದ ಯಂಕೋಬ ನಾಯಕ, ಹುಚ್ಚಪ್ಪ ಗದ್ದಿ, ವಿರೇಶ ನಾಯಕ ಇತರರಿದ್ದರು.
Published on

ಕವಿತಾಳ: ಸಮೀಪದ ಕಾಚಪೂರದಲ್ಲಿ ಯರಲಗಡ್ಡಿ ಆಂಜನೇಯ ಜಾತ್ರೆ ಅಂಗವಾಗಿ ಶ್ರೀವಾಲ್ಮೀಕಿ ನವ ತರುಣ ನಾಟ್ಯ ಸಂಘದ ಕಾಚಪೂರ ಕಲಾವಿದರು ‘ಬಡವನ ಒಡಲು ಬೆಂಕಿಯ ಸಿಡಿಲು’ ಸಾಮಾಜಿಕ ನಾಟಕವನ್ನು ಮಂಗಳವಾರ ರಾತ್ರಿ ಪ್ರದರ್ಶಿಸಿದರು. ನಾಟಕಕ್ಕೆ ಗಲಗಿನ ದೇವಯ್ಯತಾತ ಚಾಲನೆ ನೀಡಿದರು.

ಓಬಳೆಪ್ಪ, ನಾಗರಾಜ ನಾಯಕ, ಮಲ್ಲಪ್ಪ ನೆಲಕೋಳ, ಭೀಮಣ್ಣ ನಾಯಕ, ಈರಣ್ಣ ನಾಯಕ, ಮುದ್ದಪ್ಪ ನಾಯಕ, ಅಮರೇಶ ನಾಯಕ, ವೆಂಕೋಬ ಚಿತ್ರನಾಳ ಅವರು ನಾಟಕದಲ್ಲಿ ಪಾತ್ರಗಳನ್ನು ನಿರ್ವಹಿಸಿದರು. ಗ್ರಾಪಂ ಅಧ್ಯಕ್ಷ ಬಸವಲಿಂಗಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಚಾಂದ್‌ಪಾಷಾ, ಪ್ರಮುಖರಾದ ಶಿವುಕುಮಾರ ಗುರಿಕಾರ, ಯಂಕೋಬ ನಾಯಕ, ಮಲ್ಲಪ್ಪ ಶಿಕ್ಷಕ, ಹುಚ್ಚಪ್ಪ ಗಡ್ಡಿ, ಶಂಕ್ರಯ್ಯ ಪೂಜಾರಿ, ವಿರೇಶ ನಾಯಕ, ಸೋಮನಗೌಡ ಸಹುಕಾರ, ಬಸವರಾಜ ರನ್ನರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net