ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಟ

Untitled design(6)
Published on

ಕವಿತಾಳ: ಸಮೀಪದ ಹರ‌್ವಪೂರ ಮತ್ತು ತುಪ್ಪದೂರು ಗ್ರಾಮಗಳಲ್ಲಿ ಸಮರ್ಪವಾಗಿ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು, ಸರ್ವಾಜನಿಕರು ಪರದಾಡುವಂತಾಗಿದೆ.

ಎರಡು ಗ್ರಾಮದ ವಿದ್ಯಾರ್ಥಿಗಳು ಮಸ್ಕಿ, ಲಿಂಗಸುಗೂರಿಗೆಗೆ ವ್ಯಾಸಂಗಕ್ಕಾಗಿ ತೆರಳಲು ಬಸ್ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಹರ‌್ವಪೂರ ಮತ್ತು ತುಪ್ಪದೂರು ಗ್ರಾಮಗಳಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ತೆರಳು ಆಗದೆ ಸಮಸ್ಯೆ ಅನುಭವಿಸುವಂತಾಗಿದೆ.

ಮಸ್ಕಿಯಿಂದ ಬುದ್ದಿನ್ನಿ ಮತ್ತು ಬೆಂಚ ಮರಡಿವರೆಗೆ ಬಸ್ ಸಂಚಾರ ಒದಗಿಸಲಾಗಿದೆ. ಅದೇ ಬಸ್‌ನ್ನು ಬುದ್ದಿನ್ನಿ, ಬೆಂಚಮರಡಿ, ಹರ‌್ವಪೂರ, ಪಾಮನಕಲ್ಲೂರುವರೆಗೆ ಬಸ್ ಸೌಲಭ್ಯ ಕಲ್ಪಿಸಿದರೆ ಶಾಲಾ, ಕಾಲೇಜ್‌ಗಳಿಗೆ ತೆರಳು ಅನುಕೂಲವಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಶ್ವೇತಾ, ಅನಿತಾ, ಶೃತಿ, ಅನ್ನಪೂರ್ಣ, ಶೈಲಜಾ, ಈರಮ್ಮ, ಬಸಮ್ಮ, ಕವಿತಾ ಒತ್ತಾಯಿಸಿದರು.

ಹರ‌್ವಪೂರ ಮತ್ತು ತುಪ್ಪದೂರು ಗ್ರಾಮಗಳಲ್ಲಿನ ಬಸ್ ಸಮಸ್ಯೆಯ ಮಾಹಿತಿ ಪಡೆದು ಮೇಲಧಿಕಾರಿಗಳಿಗೆ ಗಮನಕ್ಕೆ ತರಲಾಗುವುದು. ಎರಡು ದಿನದೊಳಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಸ್ಕಿ ಡಿಪೋ ವ್ಯವಸ್ಥಾಪಕ ಅದಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net