ಎಸ್ಟಿ ಮೀಸಲಾತಿಗಾಗಿ 21ರಂದು ಧರಣಿ

Shivanna Vakila
ಶಿವಣ್ಣ ವಕೀಲ, ಜಿಲ್ಲಾಧ್ಯಕ್ಷ, ಹಾಲುಮತ ಮಹಾಸಭಾ.
Published on

ಕವಿತಾಳ: ಹಾಲುಮತ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ನ.21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲಾಗುವುದು ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಶಿವಣ್ಣ ವಕೀಲ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಯಲ್ಲಿ ಕುರುಬರಿಗೆ ಸಂಬಂಧಪಟ್ಟ ಗೊಂಡ, ರಾಜಗೊಂಡ, ಜೇನುಕುರುಬ, ಕಾಡು ಕುರುಬ, ಕಟ್ಟ್‌ನಾಯಕನ್, ಕುರುಮನ್ಸ್, ಕುರುಬ ಎಂಬ ಜಾತಿಗಳು ಇದ್ದರೂ ಅದನ್ನು ರಾಜ್ಯವ್ಯಾಪ್ತಿ ವಿಸ್ತರಿಸಿಲ್ಲ. ಕುಲಶಾಸ್ತ್ರ ಅಧ್ಯಯನ ಮುಗಿದಿದ್ದು ರಾಜ್ಯ ಸರ್ಕಾರ ಅಂಗಿಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಮಾಳಪ್ಪ ತೋಳ, ಪ್ರಮುಖರಾದ ಶಂಕರಗೌಡ ಬಾಗಲವಾಡ, ಮೌನೇಶ ಹಿರೇಕುರಬರ, ಭೀರಪ್ಪ ಹೀರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net