ಕುಸಿದ ಮನೆಯ ಗೋಡೆ

08102022 Kavital house coulaps
Published on

ಕವಿತಾಳ: ಪಟ್ಟಣದಲ್ಲಿ ಗುರುವಾರ ಸುರಿದ ನಿರಂತರ ಮಳೆಗೆ 11ನೇ ವಾರ್ಡ್‌ನಲ್ಲಿ ಮೋನಮ್ಮ ಕಬ್ಬೇರ ಎಂಬುವವರ ಮನೆಯ ಗೋಡೆ ಕುಸಿದಿದೆ. ಗೋಡೆ ಮನೆಯ ಹೊರಭಾಗದಲ್ಲಿ ಕುಸಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ರಸ್ತೆಗೆ ಹೊಂದಿಕೊಂಡಿದ್ದು, ದಾರಿಹೋಕರ ಮೇಲೆ ಬೀಳುವ ಸಂಭವವೂ ಇತ್ತು.

ಯಕ್ಲಾಸಪೂರ ಕೆರೆ ತುಂಬಿ ಪಟ್ಟಣದ ಹೊರವಲಯದಲ್ಲಿರುವ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಹತ್ತಿ, ತೊಗರಿ ಬೆಳೆ ಹಾನಿಯಾಗಿದೆ. ಬಾಗಲವಾಡದಲ್ಲಿ ರಸ್ತೆಗಳು ಜಲಾವೃತ ಆಗಿದ್ದವು. ಮಾನ್ವಿ ಸಂಪರ್ಕ ರಸ್ತೆಯಲ್ಲಿ ಹಳ್ಳದ ನೀರು ನಿಂತಿದ್ದರಿಂದ ಕೆಲ ಕಾಲ ಸಂಚಾರ ಸ್ಥಗಿತವಾಗಿತ್ತು. ಬೈಕ್ ಸವಾರರು ರಸ್ತೆ ದಾಟಲು ಯತ್ನಿಸುವಾಗ ನೀರು ಪಾಲಾಗುತ್ತಿರುವುದನ್ನು ಕಂಡು ಸ್ಥಳೀಯರು ರಕ್ಷಿಸಿದ್ದಾರೆ. ಉಟಕನೂರಿನಿಂದ ಧೋತರಬಂಡಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಮಾನ್ವಿ ಸಂಪರ್ಕ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net