ಹರಿ ನೀರಾವರಿ ಯೋಜನೆ ಸದುಪಯೋಗವಾಗಲಿ, ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಆಶಯ

301122 Ex-MLA Honored by Vatagal Basaveshwara Temple Board
ಕವಿತಾಳ ಸಮೀಪದ ವಟಗಲ್‌ನಲ್ಲಿ ಬಸವೇಶ್ವರ ದೇವಸ್ಥಾನ ಸಮಿತಿಯಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರನ್ನು ಬುಧವಾರ ಸನ್ಮಾನಿಸಲಾಯಿತು.
Published on

ಕವಿತಾಳ: ರೈತರ ಅನುಕೂಲಕ್ಕಾಗಿ ಬಸವೇಶ್ವರ ಹರಿ ನೀರಾವರಿ ಯೋಜನೆಯನ್ನು ನನ್ನ ಅಧಿಕಾರಾವಧಿಯಲ್ಲಿ ಜಾರಿಮಾಡಿಸಿದ್ದು, ಇದರ ಸದುಪಯೋಗವಾಗಬೇಕು ಎಂದು ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಆಶಯ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಯಾತ್ರಿ ನಿವಾಸವನ್ನು ಉದ್ಘಾಟಿಸಿ, ವಟಗಲ್ ಬಸವೇಶ್ವರ ದೇವಸ್ಥಾನ ಮಂಡಳಿಯಿಂದ ಸನ್ಮಾನ ಸ್ವಿಕರಿಸಿ, ಬುಧವಾರ ಮಾತನಾಡಿದರು. ಕೆಲವರು ಈ ಯೋಜನೆ ಸರಿಯಿಲ್ಲ ಎಂದು ಹೇಳಿ, ಅಡ್ಡಿಪಡಿಸುತ್ತಿದ್ದಾರೆ. ನೀರಾವರಿ ಯೋಜನೆಯನ್ನು ತಡೆಯುವ ಕೆಲಸವನ್ನು ಯಾರೂ ಮಾಡಬಾರದು ಎಂದರು.

ಕೆಡಿಪಿ ಸದಸ್ಯರಾದ ಶಿವಕುಮಾರಗೌಡ, ರಡ್ಡೆಪ್ಪ ಕಡಬೂರ, ಹನುಮಂತಪ್ಪ ಆನ್ವರಿ, ಚಂದ್ರಕಾತ ಪಾಟೀಲ್ ಗೂಗೇಬಾಳ, ಶಂಕರಗೌಡ ಸಾನಬಾಳ, ಸುಧಾಕರ, ಭೀಮಣ್ಣ ಕಾಚಾಪೂರ, ಶಿವಲಿಂಗಪ್ಪ, ಶಿವಪುತ್ರ, ಮಾಜಿ ಗ್ರಾಪಂ ಉಪಾಧ್ಯಕ್ಷ ಬಸವರಾಜ, ಭೀಮಣ್ಣ ನಾಯಕ ವಟಗಲ್, ಮೌನೇಶ ಕುರಬರ, ಶ್ರೀನಿವಾಸ ನಾಯಕ ಇರಕಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net