

ಕವಿತಾಳ: ಪಟ್ಟಣದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾಷ್ಟ್ರೀಯ ಕಿಶೋರ ಬಾಲ್ಯ ಸ್ವಾಸ್ಥ ಕಾರ್ಯಕ್ರಮ ಅಂಗವಾಗಿ ಡೆಂೆ ಜ್ವರ ತಡೆಗಟ್ಟಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ, ಮಳೆಗಾಲದಲ್ಲಿ ಡೆಂೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ತೀವ್ರವಾದ ಜ್ವರ, ತಲೆ ನೋವು, ವಾಂತಿ, ಮಾಂಸಖಂಡಗಳಲ್ಲಿ ನೋವು ಕಂಡು ಬಂದಲ್ಲಿ ಡೆಂೆ ಜ್ವರದ ಲಕ್ಷಣಗಳಾಗಿವೆ. ನಿರ್ಲಕ್ಷೃ ವಹಿಸದೆ ಹತ್ತಿರದ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು ತಿಳಿಸಿದರು.
ಡಾ.ಶ್ರೀಧರ್ ಇಲ್ಲೂರು ಅವರು ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಮಕ್ಕಳ ದಂತ ಸಮಸ್ಯೆ, ರಕ್ತಹೀನತೆ ಜಂತುಹುಳ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸೂಚಿಸಿದರು. ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಯಲ್ಲಿ ತೋರಿಸಲು ಸಲಹೆ ನೀಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ್ ಕುಮಾರ ಮಾತನಾಡಿದರು.