ಸಾವಲ್ಲೂ ಒಂದಾದ ದಂಪತಿ

Kavital Couple Death
ಅಮರೇಶಪ್ಪ ಗುಡಿ ಮತ್ತು ಪತ್ನಿ ಶಿವಮ್ಮ ಗುಡಿ.
Published on

ಕವಿತಾಳ: ಪತ್ನಿ ಸಾವಿನ ಸುದ್ದಿ ಕೇಳಿ ಪತಿಯೂ ಉಸಿರು ನಿಲ್ಲಿಸುವ ಮೂಲಕ ಸಾವಿನಲ್ಲೂ ದಂಪತಿ ಒಂದಾದ ಘಟನೆ ಕವಿತಾಳ ಪಟ್ಟಣದಲ್ಲಿ ಬುಧವಾರ ನಡೆದಿದೆ.

ಎಪಿಎಂಸಿ ಮಾಜಿ ನಿರ್ದೇಶಕ, ವರ್ತಕ ಅಮರೇಶಪ್ಪ ಗುಡಿ(65) ಮತ್ತು ಅವರ ಪತ್ನಿ ಶಿವಮ್ಮ (60) ಒಂದೇ ದಿನ ಮೃತಪಟ್ಟಿರುವ ದಂಪತಿ. ಶಿವಮ್ಮಗೆ ಅನಾರೋಗ್ಯದ ಕಾರಣ ಬುಧವಾರ ರಾತ್ರಿ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಪತಿ ಅಮರೇಶ ಕೂಡ ಪ್ರಾಣ ಬಿಟ್ಟಿದ್ದಾರೆ. ಸತಿ-ಪತಿಗಳಾಗಿ ತುಂಬು ಸಂಸಾರ ನಡೆಸುತ್ತಿದ್ದ ಇವರ ಸಾವು ಯಾರಿಂದಲೂ ಊಹಿಸಲಸಾಧ್ಯ ಎಂದು ನಾಗರಿಕರು ಕಂಬನಿ ಮಿಡಿದಿದ್ದಾರೆ. ಮೃತ ದಂಪತಿಗೆ ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net