

ಕವಿತಾಳ: ಸೊಳ್ಳೆಗಳನ್ನು ನಿಯಂತ್ರಿಸಿದಾಗ ಆನೆಕಾಲು ರೋಗದಿಂದ ಮುಕ್ತರಾಗಬಹುದು ಎಂದು ಕೀಟ ಶಾಸ್ತ್ರಜ್ಞ ಜೀತುಲಾಲ್ ಪವಾರ್ ಬೀದರ್ ತಿಳಿಸಿದರು.
ಪಟ್ಟಣದ ವಿವಿಧ ಮನೆಗಳಿಗೆ ಬುಧವಾರ ಭೇಟಿ ನೀಡಿ ಸೊಳ್ಳೆಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಮಾತನಾಡಿದರು.
ಆನೆಕಾಲು ರೋಗ ಕ್ಯೂಲೆಕ್ಸ್ ಸೊಳ್ಳೆ ಕಚ್ಚುವುದರಿಂದ ರೋಗ ಹರಡುತ್ತದೆ. ಈ ಸೊಳ್ಳೆಗಳಲ್ಲಿ ಫೈಲೇರಿಯಾ ಸೂಕ್ಷ್ಮಾಣು ಜಂತುಹುಳು ಜೀವಿ ಸೇರಿಕೊಂಡಿರುತ್ತದೆ. ಈ ಸೊಳ್ಳೆಗಳು ಕಚ್ಚಿದಾಗ ದೇಹದೋಳಗೆ ಪ್ರವೇಶಿಸಿ ದುದ್ದರಸ ಗ್ರಂಥಿಗಳಲ್ಲಿ ಶೇಖರಣೆಯಾಗಿ ರಕ್ತ ಪರಿಚಲನೆಯಾಗದೆ ದೇಹದ ಭಾಗವು ಊದಿಕೊಳ್ಳುತ್ತದೆ. ಇದರಿಂದ ಆನೆಕಾಲು ರೋಗ ಬರುತ್ತದೆ ಎಂದರು.
ಮಲೇರಿಯಾ ಮೇಲ್ವಿಚಾರಕ ರಂಗಸ್ವಾಮಿ ಮಾನ್ವಿ, ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ ಬಾಲಪ್ಪ ನಾಯಕ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪಕುಮಾರ, ಆರೋಗ್ಯ ಸಿಬ್ಬಂದಿ ಅಂಜನಮ್ಮ, ಆಶಾ ಕಾರ್ಯಕರ್ತೆ ಇಂದ್ರಮ್ಮ ಉಪಸ್ಥಿತರಿದ್ದರು.