ಸತತ ಮಳೆಗೆ ಜಿನ್ನಪೂರ ಬ್ರಿಡ್ಜ್ ಜಲಾವೃತ, ಶಾಲೆಗೆ ತೆರಳಲು ಮಕ್ಕಳ ಪರದಾಟ

070922 Jinnapura Bridge Sinking
ಕವಿತಾಳ ಸಮೀಪದ ಹಾಲಪೂರ ಪಂಚಾಯಿತಿ ವ್ಯಾಪ್ತಿಯ ಜಿನ್ನಪೂರದಲ್ಲಿ ವಿದ್ಯಾರ್ಥಿಗಳು ಹಳ್ಳ ದಾಟಿ ಶಾಲೆಗೆ ಹೋಗಲು ಪರದಾಡುತ್ತಿರುವುದು.
Published on

ಕವಿತಾಳ: ಸಮೀಪದ ಹಾಲಪೂರ ಗ್ರಾಪಂ ವ್ಯಾಪ್ತಿಯ ಜಿನ್ನಪೂರ ಗ್ರಾಮದಲ್ಲಿ ಮಳೆ ನೀರು ಸೇತುವೆ ಹರಿಯುತ್ತಿರುವುದರಿಂದ ಶಾಲೆಯಿಂದ ವಿದ್ಯಾರ್ಥಿಗಳು ಶಾಲೆಯನ್ನು ತಪ್ಪಿಸಿಕೊಳ್ಳುವಂತಾಗಿದೆ.

ಕಳೆದ ಮೂರು ದಿನದಿಂದ ಮಳೆ ನೀರು ಸೇತುವೆಯ ಮೇಲೆ ಹರಿಯುತ್ತಿರುವುದರಿಂದ ಶಾಲೆಯಿಂದ ವಂಚಿತರಾದ ವಿದ್ಯಾರ್ಥಿಗಳು ಬುಧವಾರ ನೀರು ಕಡಿಮೆಯಾಗಿದೆ ಎಂದು ತಿಳಿದು, ಶಿಕ್ಷಕರ ಜತೆ ಸೇತುವೆ ಮೇಲಿನ ನೀರು ದಾಟಿ ಹೋಗುವಾಗ ನೀರು ಹೆಚ್ಚು ಹರಿ ಯುತ್ತಿರುವುದನ್ನು ಗಮನಿಸಿ ಬುಧವಾರವೂ ಶಾಲೆಯಿಂದ ಹೊರಗುಳಿಯುವಂತಾಯಿತು.

ಇಲ್ಲಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಗ್ರಾಮದ ಮಕ್ಕಳು ಶಾಲೆಗೆ ಹೋಗಬೇಕೆಂದರೆ ಹಳ್ಳ ಅಡ್ಡವಿದೆ. ಕ್ಷೇತ್ರದ ಶಾಸಕರು ಇತ್ತ ಗಮನಹರಿಸಿ ಸಣ್ಣದಾದ ಸೇತುವೆ ಬದಲಿಗೆ ದೊಡ್ಡ ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರಾದ ಶಿವಂಕರಗೌಡ, ಬಸನಗೌಡ, ಮರಿಸ್ವಾಮಿ, ವಿಜಯಕುಮಾರ ಒತ್ತಾಯಿಸಿದ್ದಾರೆ. ಮುಖ್ಯ ಶಿಕ್ಷಕ ಶಿವಶಂಕರಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net