ಬಿಜೆಪಿ ಮತ ಗಳಿಕೆ ಪ್ರಮಾಣ ಹೆಚ್ಚಿಸಿ, ಕಾರ್ಯಕರ್ತರಿಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕರೆ

140223 Kotekal Pratapgouda Patil
ಕವಿತಾಳ ಸಮೀಪದ ಕೊಟೆಕಲ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರೊಂದಿಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಚರ್ಚಿಸಿದರು.
Published on

ಕವಿತಾಳ: ಕೊಟೆಕಲ್ ಗ್ರಾಮದ ದೇವಿ ಕೆರೆ ದಡದಲ್ಲಿ ಬಿಜೆಪಿ ತೋರಣದಿನ್ನಿ ಬೂತ್ ಮಟ್ಟದ ಸಭೆ ಸೋಮವಾರ ನಡೆಯಿತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ ಗಳಿಕೆ ಪ್ರಮಾಣ ಹೆಚ್ಚಿಸಲು ಕಾರ್ಯಕರ್ತರು ಪ್ರಯತ್ನಿಸಬೇಕು ಎಂದರು. ಇದಕ್ಕೂ ಮುನ್ನ ಪ್ರತಾಪಗೌಡ ಪಾಟೀಲ್, ದೇವಿ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಪರಿಶೀಲಿಸಿದರು. ವೃದ್ಧರು, ಮಹಿಳೆಯರಿಂದ ಕಷ್ಟದ ಕೆಲಸ ಮಾಡಿಸದಿರಿ ಎಂದು ಯುವಕರಿಗೆ ಸಲಹೆ ನೀಡಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಮೂಲಕ ದೂರದ ಊರುಗಳಿಗೆ ವಲಸೆ ಹೋಗವುದನ್ನು ಕೈಬಿಡಿ. ಕೆರೆ ತುಂಬಿಸುವ ಯೋಜನೆಯಲ್ಲಿ ಕೊಟೆಕಲ್ ಕೆರೆಯನ್ನೂ ಸೇರ್ಪಡೆ ಮಾಡಲಾಗಿದೆ ಎಂದರು.

ಪ್ರಮುಖರಾದ ಮಲ್ಲಿಕಾರ್ಜುನ ಚಿಲ್ಕರಾಗಿ, ಗವಿಸಿದ್ದಪ್ಪಗೌಡ ಸಂತೆಕೆಲ್ಲೂರು, ಅಮರೇಶ ನಾಯಕ, ಬಸವರಾಜ ಗದ್ದಡಕಿ, ಅಂಬಮ್ಮ ಗೌಡರ್, ಗಂಗಮ್ಮ ರಾಂಪೂರ, ದೇವಮ್ಮ, ಅಂಬಮ್ಮ ಕಮ್ಮಾರ, ರಂಗಮ್ಮ ಕವಾಲಿ, ರಮೇಶ ಪಾಟೀಲ್, ಅಂಬಣ್ಣ ಕುಂಬಾರ, ಮೌನಪ್ಪ ಕಂಬಾರ, ಬಸಪ್ಪ ಕವಾಲಿ, ಶಿವಗೇನಪ್ಪ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net