

ಕವಿತಾಳ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸ್ವಚ್ಛತೆ ಮತ್ತು ಸಾರ್ವಜನಿಕರ ಶೌಚಗೃಹ ಬಳಕೆಗೆ ಅವಕಾಶ ನೀಡಲು ಒತ್ತಾಯಿಸಿ ಭೀಮ ಆರ್ಮಿ ಸಂಘಟನೆ ಕವಿತಾಳ ಘಟಕದಿಂದ ಪಪಂನ ಮುಖ್ಯಧಿಕಾರಿ ರಡ್ಡಿ ರಾಯನಗೌಡಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಸಂಘದ ಕವಿತಾಳ ಘಟಕ ಅಧ್ಯಕ್ಷ ಆಜಪ್ಪ ಬುಳ್ಳಪೂರ ಮಾತನಾಡಿ, ಅಂಬೇಡ್ಕರ್ ಭವನವು ಪಪಂನ ನಿರ್ಲಕ್ಷೃತನದಿಂದ ಪಾಳು ಬಿದ್ದಿದೆ. ಅದನ್ನು ಸ್ವಚ್ಛಗೊಳಿಸಬೇಕು. ಅಲ್ಲದೆ ಕೊಳವೆಬಾವಿ ಕೊರೆಸಬೇಕು. 5ನೇ ವಾರ್ಡ್‌ನ ಸಾರ್ವಜನಿಕರ ಮಹಿಳೆಯರ ಶೌಚಗೃಹವನ್ನು ಬಳಕೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಕಿರಿಲಿಂಗಪ್ಪ, ಪ್ರಮುಖರಾದ ಹನುಮಂತ ಬುಳ್ಳಪೂರ, ಮೌನೇಶ ಬುಳ್ಳಪೂರ, ಹನುಮಂತ ಕೆಳಗೇರ, ಸುಭಾಷ್ ಕೆಳಗೇರ, ಮಲ್ಲಿಕಾರ್ಜುನ ಇತರರಿದ್ದರು.