ಯೋಧರ ಪರಿಶ್ರಮ ನೆನೆಯುವುದು ಅಗತ್ಯ

Untitled design(2)
Published on

ಕವಿತಾಳ: ಪಟ್ಟಣದಲ್ಲಿ ಗುರುವಾರ ಭೀಮ್ ಆರ್ಮಿ ಸಂಘದಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ವಕೀಲ ಮೌನೇಶ ಮಾತನಾಡಿ, ಬಾಬಸಾಹೇಬ್ ಅಂಬೇಡ್ಕರ್ ಅವರು ಪ್ರತಿ ವರ್ಷ ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿ ಹುತಾತ್ಮರ ಸ್ಮಾರಕಕ್ಕೆ ಗೌರವನ್ನು ಸಲ್ಲಿಸುತ್ತಿದ್ದರು. ಮಹಾನ್ ಯೋಧರ ತ್ಯಾಗ, ಪರಿಶ್ರಮ ನೆನೆಯುವುದು ಅಗತ್ಯ ಎಂದರು.

ದಲಿತ ಪ್ರಮುಖ ಈರಣ್ಣ ಕೇಳಗೇರ ಮಾತನಾಡಿ, ಮಹಾನ್ ಸೈನಿಕರ ಶೌರ್ಯದ ಸ್ಮರಣಾರ್ಥ ಪ್ರತಿ ವರ್ಷ ಜನವರಿ ಒಂದರಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net