ಗ್ರಾಪಂ ಅಧ್ಯಕ್ಷೆಯಾಗಿ ಲಲಿತಾ ಅವಿರೋಧ ಆಯ್ಕೆ

281022 Bagalawada Grama Panchayat President Selection
ಬಾಗಲವಾಡ ಗ್ರಾಪಂಗೆ ಅಧ್ಯಕ್ಷರಾಗಿ ಲಲಿತಾ ಬಸವರಾಜ ಮೇಟಿಯನ್ನು ಗುರುವಾರ ಸನ್ಮಾಯಿಸಲಾಯಿತು.
Published on

ಕವಿತಾಳ: ಬಾಗಲವಾಡ ಗ್ರಾಪಂನಲ್ಲಿ ಗುರುವಾರ ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಲಲಿತಾ ಬಸವರಾಜ ಮೇಟಿ ಅವಿರೋಧ ಆಯ್ಕೆಯಾದವರು.

28 ಸದಸ್ಯ ಬಲದ ಗ್ರಾಪಂನಲ್ಲಿ ಈ ಮೊದಲು ವಿಜಯಲಕ್ಷ್ಮೀ ಬಸವರಾಜ ದ್ಯಾವಣ್ಣ ಅಧ್ಯಕ್ಷರಾಗಿದ್ದರು. ಅವರ ರಾಜಿನಾಮೆ ನಂತರ ಚುಣಾವಣೆ ನಿಗದಿಯಾಗಿತ್ತು. ಲಲಿತಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಉಮೇಶ ಇಒ ಘೋಷಿಸಿದರು. ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮೀ ಆಯ್ಕೆಯಾಗಿದ್ದರು. ಈ ಸಂದರ್ಭ ರೇಣುಕಾದೇವಿ ಜತೆ ಅಧಿಕಾರ ಹಂಚಿಕೆಯಾಗಿತ್ತು ಎನ್ನಲಾಗುತ್ತಿದೆ.

ಸೆ.16ರಂದು 20 ಸದಸ್ಯರು ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಕೋರಿ ಸಹಾಯಕ ನಿರ್ದೇಶಕ ರಜನಿಕಾಂತ ಚವ್ವಾಣರಗೆ ಪತ್ರ ನೀಡಿದ್ದರು. ನಂತರ ವಿಜಯಲಕ್ಷ್ಮೀ ಸೆ.27ರಂದು ರಾಜೀನಾಮೆ ಸಲ್ಲಿಸಿದ್ದರು. ಆದರೆ, ರೇಣುಕಾದೇವಿ ಸದಸ್ಯರ ಬೆಂಬಲ ಪಡೆಯುವಲ್ಲಿ ವಿಫಲರಾದಾಗ ತೆರೆಮರೆಯಲ್ಲಿ ವಿಜಯಲಕ್ಷ್ಮೀ ಪ್ರಯತ್ನ ನಡೆಸಿದ್ದರು. ಅದು ಈಗ ಫಲಪ್ರದವಾಗಿದೆ. ತನ್ನ ಪತ್ನಿಯನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ ಬಸವರಾಜ ಮೇಟಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net