ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಆದ್ಯತೆ ನೀಡಲಿ

ktl-1
ಬಾಗಲವಾಡದಲ್ಲಿ ಏರ್ಪಡಿಸಿದ್ದ ಓಪನ್ ಕ್ರಿಕೆಟ್ ಟೂರ್ನಮೆಂಟ್‌ಗೆ ಗ್ರಾಪಂ ಅಧ್ಯಕ್ಷ ತಿಪ್ಪಣ್ಣ ಬಾಗಲವಾಡ ಚಾಲನೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಅಮರೇಶ ನಾಯಕ, ಪ್ರಹ್ಲಾದ್‌ರಾವ್ ಪಠವಾರಿ, ಶಂಕ್ರಯ್ಯಸ್ವಾಮಿ ಇತರರಿದ್ದರು.
Published on

ಕವಿತಾಳ: ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಸದೃಢಕ್ಕೆ ಸಹಕಾರಿ ಎಂದು ಗ್ರಾಪಂ ಅಧ್ಯಕ್ಷ ತಿಪ್ಪಣ್ಣ ಬಾಗಲವಾಡ ಹೇಳಿದರು.

ಸಮೀಪದ ಬಾಗಲವಾಡ ಗ್ರಾಮದಲ್ಲಿ ಸ್ನೇಹಜೀವಿ ಗೆಳೆಯರ ಬಳಗ ಭಾನುವಾರ ಆಯೋಜಿಸಿದ್ದ ಓಪನ್ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು.

20ಕ್ಕೂ ಹೆಚ್ಚು ಗ್ರಾಮಗಳ ಯುವಕರು ಈ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಚಾರ. ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಆದ್ಯತೆ ಸಿಗಲಿ. ಎಲ್ಲ ಸಮುದಾಯದ ಯುವಕರು ಸೇರಿ ಏಕತೆ ಸಂದೇಶ ಸಾರಬೇಕು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಅಮರೇಶ ನಾಯಕ, ಪ್ರಮುಖರಾದ ಪ್ರಹ್ಲಾದ್‌ರಾವ್ ಪಠವಾರಿ, ಶಂಕ್ರಯ್ಯ ಸ್ವಾಮಿ, ಅಮರೇಶ ದೇಸಾಯಿ, ಯಂಕೋಬ ನಾಯಕ, ಮೌನೇಶ ನಾಯಕ, ಶಿವಶಂಕರ ಮೇಟಿ, ಹುಸೇನಪ್ಪ ಕಟ್ಟೆ, ಗಂಗಾಧರ ಹಿಂದಿನಮನೆ, ಜಗದೀಶ ಸಾಸಲಮನಿ, ಅಮರೇಶ ರಾಯಗೌಡ, ರಮೇಶ, ವಿರುಪಾಕ್ಷಿ, ಚನ್ನಬಸವ, ನಾಗರಾಜ ಭೋವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net