ಅಮೀನಗಡ, ಕವಿತಾಳದಲ್ಲಿ ಮೊಹರಂ ರದ್ದು

01082022 kavital moharam meeting
Published on

ಕವಿತಾಳ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಶಾಂತಿ ಸಭೆ ಭಾನುವಾರ ಆಯೋಜಿಸಲಾಗಿತ್ತು. ಪಿಎಸ್‌ಐ ಸದ್ದಾಂ ಹುಸೇನ್ ಮಾತನಾಡಿ, ಹಬ್ಬಗಳನ್ನು ಶಾಂತಿಯಿಂದ ಆಚರಿಸಬೇಕು. ಮೊಹರಂ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಹಲಗೆ ಬಾರಿಸುವುದು, ಅಲಾಯಿ ಕುಣಿ ತೆಗೆಯುವದು, ಮೆರವಣಿಗೆ ಮಾಡುವದನ್ನು ನಿಷೇಧಿಸಲಾಗಿದೆ ಎಂದರು.

ಕಳೆದ ವರ್ಷ ಅಮೀನಗಡದಲ್ಲಿ ಅಹಿತಕರ ಘಟನೆ ನಡೆದ ಪ್ರಯುಕ್ತ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಮತ್ತು ಎಸ್ಪಿ ಬಿ.ನಿಖಿಲ್, ಅಮೀನಗಡ ಮತ್ತು ಕವಿತಾಳದಲ್ಲಿ ಮೊಹರಂ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಆದೇಶ ಮೀರಿ ಆಚರಣೆಗೆ ಮುಂದಾದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net