ಅಹಿಂಸಾ ಮಾರ್ಗದಿಂದ ಭಾರತಕ್ಕೆ ಸ್ವಾತಂತ್ರ್ಯ

background (8)
ಕವಿತಾಳದಲ್ಲಿ ಖುರೇಷಿ(ಕಸಾಬ್) ಸಮಾಜದಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಗಣ್ಯರಿಗೆ ಸನ್ಮಾನಿಸಲಾಯಿತು. ಭೂ ನ್ಯಾಯ ಮಂಡಳಿ ಸಿರವಾರ ತಾಲೂಕು ಸದಸ್ಯ ಇಮ್ತಿಯಾಜ್ ವಕೀಲ, ಚಾಂದ್‌ಪಾಷಾ, ಒವಣ್ಣ, ಕವಿತಾಳ ಖುರೇಶಿ ಸಮಾಜದ ಗೌರವ ಅಧ್ಯಕ್ಷ ಸಬ್ಜಲಿಸಾಬ್, ಅಧ್ಯಕ್ಷ ಸದಾಂ ಹುಸೇನ್ ಇತರರಿದ್ದರು.
Published on

ಕವಿತಾಳ: ಮಹಾತ್ಮ ಗಾಂಧಿಜೀ ಅವರು ದೇಶ ಕಂಡ ಮಹಾನ್‌ನಾಯಕರಾಗಿದ್ದು, ಅವರ ತತ್ವಗಳು ಸರ್ವಕಾಲಿಕವಾಗಿವೆ ಎಂದು ಭೂ ನ್ಯಾಯ ಮಂಡಳಿ ಸಿರವಾರ ತಾಲೂಕ ಸದಸ್ಯ ಇಮ್ತಿಯಾಜ್ ವಕೀಲ ಹೇಳಿದರು.

ಪಟ್ಟಣದಲ್ಲಿ ಖುರೇಷಿ(ಕಸಾಬ್) ಸಮುದಾಯದಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಗಾಂಧೀಜಿ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಅಹಿಂಸಾ ಮಾರ್ಗವನ್ನು ಅನುಸರಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಲಾಲ್ ಬಹಾದೂರ್ ಶಾಸ್ತ್ರಿ ದೇಶ ಕಂಡ ಉತ್ತಮ ಆಡಳಿತಗಾರರಾಗಿದ್ದರು ಎಂದರು.

ಸ್ಥಳೀಯ ಖುರೇಶಿ ಸಮಾಜದ ಗೌರವ ಅಧ್ಯಕ್ಷ ಸಬ್ಜಲಿಸಾಬ್, ಖುರೇಶಿ ಸಮಾಜ ಅಧ್ಯಕ್ಷ ಸದಾಂ ಹುಸೇನ್, ಮುಖಂಡರಾದ ಚಾಂದ್‌ಪಾಷಾ, ಒವಣ್ಣ, ಪದಾಧಿಕಾರಿಗಳಾದ ಮಹಮ್ಮದ್, ಹುಸೇನಸಾಬ್, ಲಾಳೆಸಾಬ್, ಬಂದೇನವಾಜ್, ಶಾಮೀದ್, ರೆಹಮಾನ್, ಖಾಜಾ, ಮೂರ್ತುಜ್, ರಜಾಕ್, ಫರೀದ್, ಅಫ್ಸರ್, ಅನ್ವರ್, ಲಾಳೆಸಾಬ್ ನಾಯಕ ಇತರರಿದ್ದರು.
ಪಟ್ಟಣ ಪಂಚಾಯಿತ, ಪೊಲೀಸ್ ಠಾಣೆ, ಪದವಿಪೂರ್ವ ಕಾಲೇಜ್, ಬಾಲಕೀಯರ ಪ್ರೌಢಶಾಲೆ ಸೇರಿ ವಿವಿಧೆಡೆ ಗಾಂಧೀಜಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net