9ಎ ಕಾಲುವೆ ಕಾಮಗಾರಿ ಮರು ಆರಂಭ, ಮಾಜಿ ಶಾಸಕ ಗಂಗಾಧರ ನಾಯಕ ಭರವಸೆ

Gangadhar Nayak Ex MLA
ಗಂಗಾಧರ ನಾಯಕ. ಮಾಜಿ ಶಾಸಕ.
Published on

ಕವಿತಾಳ: ಸ್ಥಗಿತವಾಗಿದ್ದ 9ಎ ನಾಲೆ ಕಾಮಗಾರಿ ಮರು ಆರಂಭಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಮಾಜಿ ಶಾಸಕ ಗಂಗಾಧರ ನಾಯಕ ಹೇಳಿದರು.

ತೊಪ್ಪಲದೊಡ್ಡಿಯಲ್ಲಿ ಗುರುವಾರ ರೈತರ ಸಭೆಯಲ್ಲಿ ಮಾತನಾಡಿದರು. ಅರಣ್ಯ ಇಲಾಖೆ ಆಕ್ಷೇಪಣೆ ಹಿನ್ನೆಲೆಯಲ್ಲಿ ಕಾಲುವೆ ಕಾಮಗಾರಿ ಸ್ಥಗಿತವಾಗಿತ್ತು. ನ.2ರಂದು ಸಂಸದ ರಾಜಾ ಅಮರೇಶ್ವರ ನಾಯಕ ಕಲಂಗೇರಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಲಿದ್ದಾರೆ. ಬಳಿಕ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ನಂತರ ಹುಸೇನಪೂರ, ಸೈದಾಪೂರ, ಚಿಂಚರಕಿ, ಕಡ್ಡೋಣಿ, ಹೀರಾ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚೆ ನಡೆಸಿದರು. ಬಿಜೆಪಿ ಮಂಡಲ ಅಧ್ಯಕ್ಷ ರಾಜಶೇಖರ ತೊಪ್ಪಲದೊಡ್ಡಿ, ಪ್ರಮುಖರಾದ ಡಾ.ಈಶ್ವರ್ ಸಿಂಗ್, ಮಲ್ಲಪ್ಪ ಬಸ್ಸಾಪೂರ, ಬಸನಗೌಡ, ಮೌನೇಶ, ವೀರಭದ್ರಪ್ಪ ಸಾಹುಕಾರ, ಬಸವರಾಜಸ್ವಾಮಿ ಹಣಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net