69ನೇ ಉಪನಾಲೆಗೆ ನೀರು ಹರಿಸಲು ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯ

260922 Kavital 69th left Cannel MLA Visit
ತುಂಗಭದ್ರಾ ಎಡದಂಡೆ 69ನೇ ಉಪನಾಲೆಯಲ್ಲಿ ನೀರಿನ ಪ್ರಮಾಣವನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಭಾನುವಾರ ಪರಿಶೀಲಿಸಿದರು.
Published on

ಕವಿತಾಳ: ತುಂಗಭದ್ರಾ ಎಡದಂಡೆ 69ನೇ ಉಪನಾಲೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಭಾನುವಾರ ಭೇಟಿ ನೀಡಿದರು. ನಾಲೆಯಲ್ಲಿ ಕಡಿಮೆ ಪ್ರಮಾನದ ನೀರು ಹರಿಸಲಾಗುತ್ತಿದೆ ಎಂದು ರೈತರು ಆರೋಪಿಸಿದ್ದ ಹಿನ್ನೆಲೆಯಲ್ಲಿ ನೀರಿನ ಹರಿವನ್ನು ಪರಿಶೀಲಿಸಿದರು. ರೈತರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

47, 55, 54ನೇ ಉಪನಾಲೆಗೆ ಹೆಚ್ಚು ನೀರು ಹರಿಯುತ್ತಿರುವುದರಿಂದ 69ನೇ ಉಪನಾಲೆ ವ್ಯಾಪ್ತಿಯ ರೈತರಿಗೆ ತೊಂದರೆಯಾಗಿದೆ. ಐಸಿಸಿ ಸಭೆಯ ನಿರ್ಣಯದಂತೆ ನೀರು ಹರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವದು ಎಂದು ಶಾಸಕ ಎಚ್ಚರಿಸಿದರು. 66ನೇ ಉಪನಾಲೆಯಲ್ಲಿ ನೀರಿನ ಹರಿವನ್ನು ಕೂಡ ಪರಿಶೀಲಿಸಿದರು. ಪ್ರಮುಖರಾದ ಶರಣಪ್ಪಗೌಡ ಮದ್ಲಾಪೂರ, ಪ್ರಸಾದರಡ್ಡಿ, ಸತ್ಯನಾರಾಯಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net