ಜು.18ರಂದು ಬೃಹತ್ ಜನಸಂಕಲ್ಪ ಸಮಾವೇಶ

ktl-1
ಕವಿತಾಳದಲ್ಲಿ ಜನಸಂಕಲ್ಪ ಸಮಾವೇಶದ ಪೂರ್ವಭಾವಿ ಸಭೆಗೆ ಕೆಎಸ್‌ಎನ್ ಅಭಿಮಾನಿಗಳ ಬಳಗದ ತಾಲೂಕಾಧ್ಯಕ್ಷ ತಿಮ್ಮರಡ್ಡಿ ಭೋಗಾವತಿ ಚಾಲನೆ ನೀಡಿದರು. ಬಿಜೆಪಿ ತಾಲೂಕಾಧ್ಯಕ್ಷ ದೇವರಾಜಗೌಡ ಜಾಡಲದಿನ್ನಿ, ಜಿಪಂ ಮಾಜಿ ಸದಸ್ಯ ಅಮರೇಶಪ್ಪ ಇತರರಿದ್ದರು.
Published on

ಕವಿತಾಳ: ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಸಮಗ್ರ ಕೃಷಿ, ಏಮ್ಸ್ ಮತ್ತು ಶಿಕ್ಷಣಕ್ಕಾಗಿ ಕೆ.ಶಿವನಗೌಡ ನಾಯಕ (ಕೆಎಸ್‌ಎನ್)ಅಭಿಮಾನಿ ಬಳಗ ಸ್ಥಾಪಿಸಲಾಗಿದೆ ಎಂದು ಬಳಗದ ಮಾನ್ವಿ ತಾಲೂಕಾಧ್ಯಕ್ಷ ತಿಮ್ಮರಡ್ಡಿ ಭೋಗಾವತಿ ಹೇಳಿದರು.

ಮಾಜಿ ಸಚಿವ ಕೆ. ಶಿವನಗೌಡ ನಾಯಕ ಜನ್ಮದಿನದ ಅಂಗವಾಗಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಬೃಹತ್ ಜನಸಂಕಲ್ಪ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಬುಧವಾರ ಮಾತನಾಡಿದರು.

ಜಿಲ್ಲೆಯ ಪ್ರಮುಖ ರಾಜಕಾರಣಿ, ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ 48ನೇ ಜನ್ಮದಿನಾಚರಣೆ ಅಂಗವಾಗಿ ಚೀಕಲಪರ್ವಿ ಹತ್ತಿರದ ತುಂಗಭದ್ರಾ ಎಡದಂಡೆ ನಾಲೆಗೆ ಸೇತುವೆ ನಿರ್ಮಾಣ, ಏಮ್ಸ್ ಸ್ಥಾಪನೆ, 9ಎ, 5ಎ ಸೇರಿದಂತೆ ನೀರಾವರಿ ಯೋಜನೆಗಳ ಪೂರ್ಣಗೊಳಿಸುವ ಬಗ್ಗೆ ಅಭಿಮಾನಿ ಬಳಗದಿಂದ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಸಮಾವೇಶ ದಿನ ಜು.18ರಂದು ಪಟ್ಟಣದಲ್ಲಿ ಜನಪರ ಅನೇಕ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಬಿಜೆಪಿ ತಾಲೂಕಾಧ್ಯಕ್ಷ ದೇವರಾಜಗೌಡ ಜಾಡಲದಿನ್ನಿ, ಜಿಪಂ ಮಾಜಿ ಸದಸ್ಯ ಅಮರೇಶಪ್ಪ , ಪ್ರಮುಖರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ನಾಗಲಿಂಗಸ್ವಾಮಿ, ಶರಣಪ್ಪ ಮುಖಾನೆ, ಉಮೇಶ ಸಹುಕಾರ, ಶಿವಕುಮಾರ ವಟಗಲ್, ವೆಂಕಟೇಶ ಅರಕೇರಿ, ಯಮನಪ್ಪ ದಿನ್ನಿ, ಬಸವರಾಜ ಗಫೂರ್, ನೀಲಕಂಠ ಭೋವಿ, ಶಿವಣ್ಣ ನಾಯಕ, ರಾಘವೇಂದ್ರ ಶೆಟ್ಟಿ, ಯಲ್ಲಪ್ಪ ಭೋವಿ, ರಾಜಗೋಪಾಲ ನಾಯಕ, ಜಂಬಣ್ಣ ನಿಲಗಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net