ಶಾಂತಿಯಿಂದ ಮೊಹರಂ ಆಚರಿಸಿ

ktl-1
ಕವಿತಾಳ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ವೆಂಕಟೇಶ ನಾಯಕ ಮಾತನಾಡಿದರು. ಮುಖಂಡರಾದ ಅಜಾಂಪಾಷಾ ಮುಲ್ಲಾ, ಭೀಮಣ್ಣ ನಾಯಕ, ಚಾಂದ್‌ಪಾಷಾ, ಅಮರೇಶ ದಿನ್ನಿ, ಅಮರೇಶ ಭೋವಿ, ಅಲ್ಲಮಪ್ರಭು, ಹುಚ್ಚಪ್ಪ ವಡವಟ್ಟಿ, ಪೊಲೀಸ್ ಸಿಬ್ಬಂದಿ ಮಲ್ಲಿಕಾರ್ಜುನ, ರಾಜಶೇಖರ, ಶಂಕರ್ ಇದ್ದರು.
Published on

ಕವಿತಾಳ: ಹಿಂದು-ಮುಸ್ಲಿಮರು ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಪಿಎಸ್‌ಐ ವೆಂಕಟೇಶ ನಾಯಕ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬದ ನೆಪದಲ್ಲಿ ಮದ್ಯಪಾನ ಮಾಡುವುದು, ಅಕ್ರಮ ಮಾರಾಟ ಮಾಡುವುದು, ಮೆರವಣಿಗೆ ಹಾಗೂ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

ಯಾರಾದರೂ ಗಲಾಟೆ ಮಾಡಿದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಠಾಣೆ ವ್ಯಾಪ್ತಿಯ ಕವಿತಾಳ, ಅಮೀನಗಡ, ಗುಗೆಬಾಳ, ಬಾಗಲವಾಡ, ಚಿಕ್ಕದಿನ್ನಿ ಸೇರಿದಂತೆ ಇತರ ಗ್ರಾಮಗಳಲ್ಲಿ ಮೊಹರಂ ಆಚರಣೆ ಕುರಿತು ಮೇಲಧಿಕಾರಿಗಳ ಆದೇಶವನ್ನು ಪಾಲಿಸಬೆಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net