ದುಬೈನ ಅಬುದಾಬಿಯಿಂದ ಕವಿತಾಳಕ್ಕೆ ವಾಪಸ್ಸಾದವರ ಆರೋಗ್ಯ ತಪಾಸಣೆ

18032020 Kavital Corona Virus Health Check
Published on

ಕವಿತಾಳ: ಲಕ್ಷ್ಮಿಕ್ಯಾಂಪ್‌ನ ನಿವಾಸಿ ಆಂಜನೇಯ ದಂಪತಿ ದುಬೈನ ಅಬುದಾಬಿಯಿಂದ ವಾಪಸ್ಸಾಗಿದ್ದಾರೆಂಬ ಮಾಹಿತಿ ತಿಳಿದ ಮಾನ್ವಿ ತಹಸಿಲ್ದಾರ್ ಅಮರೇಶ ಬಿರಾದಾರ ಮತ್ತು ತಾಲೂಕ ಆರೋಗ್ಯಾಧಿಕಾರಿ ಚಂದ್ರಶೇಖರಯ್ಯ ಮಂಗಳವಾರ ಸಂಜೆ ಕ್ಯಾಂಪ್‌ಗೆ ತೆರಳಿ ಆರೋಗ್ಯ ವಿಚಾರಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಕಲಬುರಗಿಯಲ್ಲಿ ಇತ್ತೀಚೆಗೆ ಕರೊನಾ ವೈರಸ್‌ನಿಂದ ಸಾವಿಗೀಡಾದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಕವಿತಾಳದ ವ್ಯಕ್ತಿಯೊಬ್ಬರ ಮನೆಗೆ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಅಮೃತ್ ರಾಠೋಡ್ ಬುಧವಾರ ತೆರಳಿ ಮಾಹಿತಿ ಸಂಗ್ರಹಿಸಿದರು.

ಬುಧವಾರ ಕವಿತಾಳದ ವಾರದ ಸಂತೆಯಾದ್ದರಿಂದ ಬೆಳ್ಳಂಬೆಳಗ್ಗೆ ಕಾಯಿಪಲ್ಲೆ ಮಾರಾಟದಲ್ಲಿ ತೊಡಗಿದ್ದವರ ಮನವೊಲಿಸಿ ಸಂತೆ ರದ್ದುಗೊಳಿಸಿ ಒಂದೆಡೆ ಜನ ಸೇರುವುದನ್ನು ತಪ್ಪಿಸುವಲ್ಲಿ ಪಪಂ ಮತ್ತು ಪೊಲೀಸ್ ಸಿಬ್ಬಂದಿ ಯಶ ಕಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net