ಬಿಜೆಪಿ ರೈತರ ಪರವಾಗಿದೆ; ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಪ್ರತಿಪಾದನೆ

07042021 Kavital BJP prachara
Published on

ಕವಿತಾಳ: ಬಿಜೆಪಿ ರೈತರ ಪರವಾಗಿದ್ದು, ಕಾಂಗ್ರೆಸ್ ನಾಯಕರ ಸುಳ್ಳು ಆರೋಪಗಳಿಗೆ ಕಿವಿಗೊಡಬೇಡಿ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಜನರಲ್ಲಿ ಮನವಿ ಮಾಡಿದರು.

ಸಮೀಪದ ತೋರಣದಿನ್ನಿ ಜಿಪಂ ಕ್ಷೇತ್ರ ವ್ಯಾಪ್ತಿಯ ಹಿರೇದಿನ್ನಿ, ಮರಕಂದಿನ್ನಿ, ಮಲ್ಲದಗುಡ್ಡ, ಡೊಣಮರಡಿ ಮತ್ತಿತರ ಗ್ರಾಮಗಳಲ್ಲಿ ಬುಧವಾರ ಪ್ರತಾಪಗೌಡ ಪಾಟೀಲರ ಪರ ಪ್ರಚಾರ ನಡೆಸಿ, ಮಾತನಾಡಿದರು.

50ಕ್ಕೂ ಹೆಚ್ಚು ವರ್ಷ ದೇಶವನ್ನಾಳಿದ ಕಾಂಗ್ರೆಸ್ ಯಾರಿಗೆ ಒಳ್ಳೆಯದನ್ನು ಮಾಡಿದೆ ಎಂದು ಪ್ರಶ್ನಿಸಿದ ಅವರು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಗತ್ತಿನಾದ್ಯಂದ ಭಾರತದ ಘನತೆ ಹೆಚ್ಚಿದೆ ಎಂದರು. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕರದಲ್ಲಿರುವ ಬಿಜೆಪಿ ಸರ್ಕಾರಗಳು ರೈತರು ಮತ್ತು ಜನ ಸಾಮಾನ್ಯರ ಏಳಿಗೆಗಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಿದೆ ಎಂದರು.

ಜಿಪಂ ಸದಸ್ಯ ಹನುಮಂತಪ್ಪ ಗುಡಗಲದಿನ್ನಿ, ಮುಖಂಡರಾದ ಚೇತನ ಪಾಟೀಲ್, ಹನುಮಂತಪ್ಪ, ಶಿವರಾಜ ಪಾಟೀಲ್ ಡೊಣಮರಡಿ, ಹನುಮಂತಪ್ಪ ಪೋಸ್ಟ್, ಪಂಪಣ್ಣ ಹಿರೇದಿನ್ನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net