ಬಾದರದಿನ್ನಿ ಗ್ರಾಮಕ್ಕೆ ಸಿಡಿಪಿಒ ಭೇಟಿ

ktl-1
ಚಿಕ್ಕಬಾರದದಿನ್ನಿ ಗ್ರಾಮದ ನಿರ್ಮಾಣ ಹಂತದ ಅಂಗನವಾಡಿ ಕೇಂದ್ರಕ್ಕೆ ಸಿಡಿಪಿಒ ನಾಗರತ್ನಾ, ತಾಪಂ ಎಡಿ (ನರೇಗಾ)ಮಂಜುನಾಥ, ಭೇಟಿ ನೀಡಿದರು. ಪ್ರಮುಖರಾದ ಚನ್ನಬಸವ, ನರಸಪ್ಪ, ಕರಿಯಪ್ಪ, ಲಕ್ಷ್ಮಣ, ಆಂಜನೇಯ, ರೇಣುಕಾರಾಜ, ಮೌನೇಶ, ಲಿಂಗಯ್ಯನಾಯಕ ಇತರರಿದ್ದರು.
Published on

ಕವಿತಾಳ: ಸಮೀಪದ ಚಿಕ್ಕಬಾದರದಿನ್ನಿ ಗ್ರಾಮದಲ್ಲಿ ಅಪೂರ್ಣವಾದ ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಸಿಡಿಪಿಒ ನಾಗರತ್ನಾ, ತಾಪಂ ಎಡಿ (ನರೇಗಾ)ಮಂಜುನಾಥ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಅಂಗನವಾಡಿ ಕಟ್ಟಡ ಅಪೂರ್ಣ ಕುರಿತು ವಿಜಯವಾಣಿ ಜೂ.19ರಂದು ‘ಕಟ್ಟಡ ಅಪೂರ್ಣ, ಚಿಣ್ಣರ ಅಲೆದಾಟ‘ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಸಿಡಿಪಿಒ ಹಾಗೂ ತಾಪಂ ಎಡಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಂದ ಮಾಹಿತಿ ಪಡೆದರು.

2020-21ನೇ ಸಾಲಿನಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕಾಗಿ ಹಳೆಯ ಕಟ್ಟಡ ತೆರವುಗೊಳಿಸಿದ್ದು, ಈವರೆಗೂ ಕಟ್ಟಡ ನಿರ್ಮಾಣ ಮಾಡಿಲ್ಲ. ಇದರಿಂದ ನರೇಗಾ ಯೋಜನೆಯ 10 ಲಕ್ಷ ರೂ. ಅನುದಾನ ದುರುಪಯೋಗವಾಗಿದೆ. ಜತೆಗೆ ಮಕ್ಕಳಿಗೆ ತೊಂದರೆಯಾಗಿದ್ದು, ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಕೋರಿದರು.

ಸಿಡಿಪಿಒ ನಾಗರತ್ನಾ ಮಾತನಾಡಿ, ಅಪೂರ್ಣ ಕಟ್ಟಡ ಕಾಮಗಾರಿ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ತಾತ್ಕಲಿಕವಾಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಅಂಗನಾಡಿ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದರು. ನರೇಗಾ ಎಡಿ ಮಂಜುನಾಥ ಮಾತನಾಡಿ, ಅನುದಾನ ದರ್ಬಳಕೆ ಆಗಿರುವ ಕುರಿತು ಪರೀಶಿಲಿಸಿ ಕ್ರಮವಹಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net