ಶೌಚಗೃಹ ಹಗರಣ, ಅಧಿಕಾರಿಗಳನ್ನು ವರ್ಗಾಯಿಸಿ

310522 Protest at Kavitala Pattana panchayat
ಕವಿತಾಳ ಪಪಂ ಆವರಣದಲ್ಲಿ ಪ್ರತಿಭಟನೆ ನಿರತರನ್ನು ತಹಸೀಲ್ದಾರ ವಿಜಯೇಂದ್ರ ಹುಲಿನಾಯಕ ಮನವೊಲಿಸಲು ಪ್ರಯತ್ನಿಸಿದರು.
Published on

ಕವಿತಾಳ: ಶೌಚಗೃಹ ಹಗರಣದಲ್ಲಿ ಭಾಗಿಯಾದ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ತಿಮ್ಮಣ್ಣ ಜಗ್ಲಿ ಮತ್ತು ಇಂಜನಿಯರ್ ಶಿವಕುಮಾರರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್ ವಿಜಯೆಂದ್ರ ಹುಲಿನಾಯಕ ಧರಣಿ ಕೈಬಿಡುವಂತೆ ಮನವಿ ಮಾಡಿದರು. ಸಿಒ ಮತ್ತು ಇಂಜನಿಯರ್ ನಮಗೆ ಬೇಡ. ಡಿಸಿ ಬರುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ. ಹೋರಾಟ ಮುಂದುವರಿಸಲಾಗುವುದು ಎಂದು ಸದಸ್ಯರು ಪಟ್ಟುಹಿಡಿದರು. ಪ್ರಮುಖರಾದ ಲಿಂಗರಾಜ ಕಂದಗಲ್, ರಾಘವೇಂದ್ರಶೆಟ್ಟಿ, ರಮೇಶ ನಗನೂರು, ಅಮರೇಶ ಕಟ್ಟಿಮನಿ, ಸುರೇಶ, ಖಾಸಿಂಭಿ ಚಾಂದ್‌ಪಾಷಾ, ಅಲ್ಲಮ ಪ್ರಭು, ಮೈಬುಸಾಬ್, ಚಂದ್ರು, ಓವಣ್ಣ, ಗಿಡ್ಡವಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net