ಕವಿತಾ ಅಧ್ಯಕ್ಷೆ, ರುಕ್ಮಿಣಿ ಉಪಾಧ್ಯಕ್ಷೆ

web8
ಚಿಂಚಲಿ ಪಪಂಗೆ ಅಧ್ಯಕ್ಷೆಯಾಗಿ ಕವಿತಾ ಯಡ್ರಾಂವೆ, ಉಪಾಧ್ಯಕ್ಷೆಯಾಗಿ ರುಕ್ಮಿಣಿ ಹಾರೂಗೇರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಶಾಸಕ ಡಿ.ಎಂ.ಐಹೊಳೆ, ಸುರೇಶ ಮುಂಜೆ, ವಿ.ಆರ್.ಬಳ್ಳಾರಿ, ಜಿತೇಂದ್ರ ಜಾಧವ ಇತರರಿದ್ದರು.
Published on

ರಾಯಬಾಗ: ಇಲ್ಲಿನ ಪಪಂ ಸಭಾಂಗಣದಲ್ಲಿ ಮೊದಲ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಈಚೆಗೆ ಜರುಗಿದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆ ವರ್ಗದಿಂದ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಕವಿತಾ ಯಡ್ರಾಂವೆ ಹಾಗೂ ಹಿಂದುಳಿದ ವರ್ಗ ಅ ಮಹಿಳೆ ವರ್ಗದಿಂದ ಉಪಾಧ್ಯಕ್ಷೆಯಾಗಿ ಬಿಜೆಪಿಯ ರುಕ್ಮಿಣಿ ಹಾರೂಗೇರಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಸುರೇಶ ಮುಂಜೆ ಘೋಷಿಸಿದರು.

ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಎಲ್ಲ ಪಕ್ಷ ಹಾಗೂ ಪಕ್ಷೇತರರು ಒಗ್ಗೂಡಿ ಪಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಪಕ್ಷ ಬೇಧ ಮರೆತು ಚಿಂಚಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಮಾತನಾಡಿದರು.

ಮುಖ್ಯಾಧಿಕಾರಿ ವಿ.ಆರ್.ಬಳ್ಳಾರಿ, ಸದಸ್ಯರಾದ ಜಿತೇಂದ್ರ ಜಾಧವ, ಸಂಭಾಜಿ ಶಿಂಧೆ, ಸುಭಾಷ ಮಲಾಜುರೆ, ಮುಖಂಡರಾದ ಶಿವು ಪಾಟೀಲ, ಆರ್.ಎಸ್.ಶಿರಗಾಂವೆ, ಸಿದ್ದು ಬಂಡಗರ, ಅಬ್ಬಾಸ್ ಮುಲ್ಲಾ, ಅರ್ಜುನ ನಾಯಿಕವಾಡಿ, ಅಂಕುಶ ಜಾಧವ, ಪ್ರವೀಣ ಹುಕ್ಕೇರಿ, ಸುಭಾಷ ರೆಂಟಿ, ಸುಲ್ತಾನ ಪೂಜಾರಿ, ಅಶೋಕ ಕುಲಗುಡೆ, ಜಾಕೀರ್ ತರಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net