ಕವಿತಾಳ ಪಪಂ ಅಧ್ಯಕ್ಷೆ ಯಾರು ?

Untitled design (11)
ಕವಿತಾಳ ಪಂಚಾಯಿತಿ ಹೊರನೋಟ.
Published on

ಕವಿತಾಳ: ಪಪಂಗೆ ಎರಡು ವರ್ಷಗಳ ನಂತರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಕಟಗೊಂಡಿದ್ದು, ಆ.30ರಂದು ಗದ್ದುಗೆ ಯಾರ ಪಾಲಾಗಲಿದೆ ಎಂಬುದು ತಿಳಿಯಲಿದೆ.

ಪಟ್ಟಣ ಪಂಚಾಯಿತಿಗೆ ಒಟ್ಟು 16 ಸದಸ್ಯರಲ್ಲಿ ಏಂಟು ಜನ ಕಾಂಗ್ರೆಸ್, ನಾಲ್ಕು ಜನ ಬಿಜೆಪಿ, ಮೂರು ಜನ ಜೆಡಿಎಸ್, ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಬಹುಮತಕ್ಕೆ ಒಂಬತ್ತು ಸದಸ್ಯರ ಅವಶ್ಯಕತೆಯಿದೆ. ಶಾಸಕ ಮತ್ತು ಸಂಸದರ ಕೂಡ ಮತ ಚಾಲಾಯಿಸುವುದರಿಂದ ಒಟ್ಟು ಹತ್ತು ಸದಸ್ಯರ ಬಲ ಕಾಂಗ್ರೆಸ್‌ಗೆ ಇದೆ.

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಎಸ್ಸಿ ಮಹಿಳೆ ಮೀಸಲಾಗಿದೆ. ಕಾಂಗ್ರೆಸ್‌ನ 8ನೇ ವಾರ್ಡ್ ಖಾಸಿಂ ಬೀ, 14ನೇ ವಾರ್ಡ್‌ನ ರಾಜೇಶ್ವರಿ, 16ನೇ ವಾರ್ಡ್‌ನ ರಮಾದೇವಿ ಅವರು ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ನಡೆಸುತ್ತಿದ್ದಾರೆ. ಉಪಾಧ್ಯಕ್ಷ ಸ್ಥಾನ ಎಸ್ಸಿ ಸ್ಥಾನಕ್ಕೆ ನಿಗದಿಯಾಗಿದೆ. ಎಸ್ಸಿ ಸದಸ್ಯೆ ಎಲಿಜಾ ಒಬ್ಬರೇ ಇರುವುದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇಲ್ಲದಂತಾಗಿದೆ.

ಬಿಜೆಪಿ ಅವರು ಅತೃಪ್ತ ಸದಸ್ಯರನ್ನು ಗುಟ್ಟಾಗಿ ಭೇಟಿಯಾದ ವಿಷಯ ಕಾಂಗ್ರೆಸ್ ಗಮನಿಸಿದೆ. ಪಕ್ಷದ ಅಸಮಾಧಾನ ತಡೆಯಲು ಮೂರು ಸದಸ್ಯರ ಪತಿಯರಿಗೆ ಯಾರಿಗಾದರು ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಲಾಗುವುದು ಚುನಾವಣೆ ದಿನದವರೆಗೆ ಒಗ್ಗಟ್ಟಾಗಿ ಇರುವಂತೆ ಆದೇಶ ಬಂದಿರುವುದು ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್ ಪಕ್ಷದ ಎಂಟು ಜನ ಸದಸ್ಯರು ಹಾಗೂ ಸಂಬಂಧಿಕರು ಈಗಾಗಲೇ ಪ್ರವಾಸ ಕೈಗೊಂಡಿದ್ದಾರೆ. ಚುನಾವಣೆ ಕಾವು ದಿನದಿಂದ ಏರುತ್ತಿದೆ. ಜನರಲ್ಲಿ ಅಧ್ಯಕ್ಷರು ಯಾರು ಎನ್ನುವ ಕುತೂಹಲ ಮೂಡಿದೆ.

3ನೇ ವಾರ್ಡ್ ಮಲ್ಲಿಕಾರ್ಜುನ ನಾಗನಗೌಡ, 7ನೇ ವಾರ್ಡ್ ಎಲೀಜಾ ಓವಣ್ಣ, 8ನೇ ವಾರ್ಡ್ ಖಾಸಿಂ ಬೀ, 10ನೇ ವಾರ್ಡ್ ಅಮರೇಶ, 13ನೇ ವಾರ್ಡ್ ಲಿಂಗರಾಜ ಕಂದಗಲ್, 14ನೇ ವಾರ್ಡ್ ರಾಜೇಶ್ವರಿ ತಿಪ್ಪಯ್ಯಸ್ವಾಮಿ, 15ನೇ ವಾರ್ಡ್ ಹುಲಿಗೆಪ್ಪ ಕವಿತಾಳ, 16ನೇ ವಾರ್ಡ್ ವಿ.ರಮಾದೇವಿ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಮೀಸಲಾತಿ ಪ್ರಕಟವಾಗಿದ್ದರಿಂದ ಕಾಂಗ್ರೆಸ್ ಅಧಿಕಾರ ಪಡೆಯುವುದು ಖಚಿತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net